ಬಂಟ್ವಾಳ; ರಿಕ್ಷಾ ಚಾಲಕರ ಎರಡು ಗುಂಪುಗಳ‌ ನಡುವೆ ಹೊಡೆದಾಟ, ಪುರಸಭಾ ಸದಸ್ಯನಿಗೂ ಗಾಯ, ಲಘು ಲಾಠೀ ಪ್ರಹಾರ

ಬಂಟ್ವಾಳ:ಕ್ಯೂ ನಿಲ್ಲುವ ವಿಚಾರದಲ್ಲಿ ರಿಕ್ಷಾ ಚಾಲಕರ ಎರಡು ಗುಂಪುಗಳ‌ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ತಣ್ಣಗಾಗಿಸಲು ಸ್ಥಳಕ್ಕೆ ಬಂದಿದ್ದ ಸ್ಥಳೀಯ ಪುರಸಭಾ ಸದಸ್ಯನಿಗೆ ಗಾಯವಾಗಿದ್ದು, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ‌ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ‌ ಬಿಸಿರೋಡಿನ ಕೈಕಂಬದಲ್ಲಿ ನಡೆದಿದೆ.

ಬಿಸಿರೋಡಿನ ಕೈಕಂಬದಲ್ಲಿ ರಿಕ್ಷಾ ಕ್ಯೂ ನ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್ಷಾ ಯೂನಿಯನ್ ಪ್ರಮುಖನ ಮೇಲೆ ಒಂದು‌ ಗುಂಪು ಹಲ್ಲೆ ನಡೆಸಿದೆ.ಪ್ರತಿಯಾಗಿ ಹಲ್ಲೆಗೊಳಗಾದವನ ಕಡೆಯ ಗುಂಪು ಹಲ್ಲೆ ನಡೆಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.

ಗಲಾಟೆಯನ್ನು ನಿಲ್ಲಿಸಲು ಸ್ಥಳೀಯ ಪುರಸಭಾ ಸದಸ್ಯ ಹಸೈನರ್ ಗುಂಪಿನ ಮಧ್ಯೆ ಬಂದಾಗ ಇವರಿಗೂ ಗಾಯವಾಗಿದೆ.ಗಾಯವಾಗಿರುವ ಹಸೈನರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು, ಎರಡು ಗುಂಪುಗಳನ್ನು ಚದರಿಸಲು ಲಾಠಿ ಬೀಸಿದ್ದಾರೆ.

ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ