ಬಂಟ್ವಾಳ; ಮಸೀದಿಯಲ್ಲಿ 4 ಲಕ್ಷ ರೂ.ಗೆ ಏಲಂ ಆದ ಒಂದು ಹಲಸಿನ ಹಣ್ಣು!; ಅಚ್ಚರಿ ಸುದ್ದಿ

ಬಂಟ್ವಾಳ;ಮಸೀದಿಯಿಂದರಲ್ಲಿ ನಡೆದ ಏಲಂನಲ್ಲಿ ಬರೊಬ್ಬರಿ 4 ಲಕ್ಷ 33 ಸಾವಿರ ರೂ.ಗೆ ಒಂದು ಹಲಸಿನ ಕಾಯಿ ಏಲಂ ಆಗಿದ್ದು, ಸುದ್ದಿ ಇದೀಗ ಕರಾವಳಿಯಲ್ಲಿ ಭಾರೀ ವೈರಲ್ ಆಗಿದೆ.

ಮೂಲರಪಟ್ನ ಎಂಬಲ್ಲಿ ನವೀಕೃತ ಮಸೀದಿ ಉದ್ಘಾಟಣೆ ಕಾರ್ಯಕ್ರಮದಲ್ಲಿ ಖ್ಯಾತ ಇಸ್ಲಾಮಿಕ್ ವಾಗ್ಮಿ, ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಕೇರಳ ಅವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಒಂದು ಹಲಸಿನ ಕಾಯಿ‌ ಏಲಂಗೆ ತರಲಾಗಿತ್ತು.ಹಲಸಿನ‌ ಕಾಯಿ ಸಿರಾಜುದ್ದೀನ್ ಖಾಸಿಮಿ ಏಲಂ ಕರೆದಾಗ ಲತೀಫ್ ಮತ್ತು ಅಝೀಝ್ ಅವರ ನಡುವೆ ಭಾರೀ ಪೈಪೋಟಿ ನಡೆದಿದೆ.

ಕೊನೆಗೆ 4,33,333 ರೂ.ಗೆ ಹಲಸಿನ ಕಾಯಿ ಲತೀಫ್ ಅವರ ಪಾಲಾಗಿದೆ.ಇದೀಗ ಈ ಸುದ್ದಿ ಕರಾವಳಿಯಲ್ಲಿ ಭಾರೀ ವೈರಲ್ ಆಗಿದ್ದು, ಜನರು ಅಚ್ಚರಿಯನ್ನು‌ ವ್ಯಕ್ತಪಡಿಸಿದ್ದಾರೆ.

ಏಲಂ ವೇಳೆ ಹಲವರು ಭಾಗವಹಿಸಿದ್ದರು. ಆದರೆ ಭಾರೀ ಪೈಪೋಟಿಯೇ ನಡೆದಿತ್ತು. ಅಂತಿಮವಾಗಿ ಬೃಹತ್ ಮೊತ್ತಕ್ಕೆ ಹಲಸಿನ ಕಾಯಿಯೊಂದು ಏಲಂ ಆಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ