ಬಂಟ್ವಾಳ;ಪ್ರತಿಭಟನೆಯಲ್ಲಿ ಭಾಗವಹಿಸಲು ಹೋದ ವ್ಯಕ್ತಿಯ ಆಟೋ ರಿಕ್ಷಾವನ್ನು ಕಳ್ಳರು ಕದ್ದೊಯ್ದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕು ಕಚೇರಿ ಮುಂಭಾಗ 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ರೈತಸಂಘ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಗೆ ಬಂದ ವ್ಯಕ್ತಿ ಬಿ.ಸಿ.ರೋಡಿನ ಲಯನ್ಸ್ ಭವನದ ಬಳಿ ಆಟೊವನ್ನು ನಿಲ್ಲಿಸಿದ್ದರು.ಇದನ್ನು ಕಳವು ಮಾಡಲಾಗಿದೆ.
ಬೆಳಗ್ಗೆ 10.30ರ ವೇಳೆ ಅಟೋ ರಿಕ್ಷಾವನ್ನು ನಿಲ್ಲಿಸಿ, ರೈತರ ಪ್ರತಿಭಟನೆಗೆ ತೆರಳಿದ್ದಾರೆ. ಮಧ್ಯಾಹ್ನ 3.00 ಗಂಟೆಗೆ ಬಂದು ನೋಡುವಾಗ ರಿಕ್ಷಾ ಕಳವಾಗಿದೆ.
ಈ ಕುರಿತ ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಲಾಗಿದೆ.