ಬಂಟ್ವಾಳ; ವ್ಯಕ್ತಿಯೋರ್ವನ ಕೊಲೆಯತ್ನ, ಆಸ್ಪತ್ರೆಗೆ ದಾಖಲು

ಬಂಟ್ವಾಳ;ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿ, ಕೈ ಕಡಿದು ತುಂಡು ಮಾಡಿದ ಬಗ್ಗೆ ಬಂಟ್ವಾಳ‌ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ಶಿವರಾಜ್ ಕುಲಾಲ್ ಎಂಬಾವರ ಕೊಲೆ ಯತ್ನ ಮಾಡಲಾಗಿದೆ.ಸ್ನೇಹಿತ ಸಂತೋಷ್ ಎಂಬಾತ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ.

ಶಿವರಾಜ್ ಕುಲಾಲ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚಿಗೆ ಗುತ್ತಿಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು. ಆದರೆ ಮೇ.21 ರಂದು ರಾತ್ರಿ ವೇಳೆ ಈತನ ಮೊಬೈಲ್ ಗೆ ಸಂತೋಷ ಕರೆ ಮಾಡಿ, ನಿನ್ನಲ್ಲಿ ಮಾತನಾಡಲು ಇದೆ. ಭೇಟಿ ಮಾಡು ಎಂದು ಹೇಳಿದ್ದಾನೆ.

ನಿನ್ನಲ್ಲಿ ಮಾತನಾಡಲು ಇದೆ, ಎಂದು ಹೇಳಿದಕ್ಕೆ ಶಿವರಾಜ್ ಕುಲಾಲ್ ಅವರು ನಾನು ಈಗ ಬರಲು ಆಗುವುದಿಲ್ಲ ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದಾರೆ.ಅದಕ್ಕೆ ಆತನು ಇಲ್ಲ ಈಗಲೇ ಬಾ ಎಂದು ಹೇಳಿದ್ದು, ಆಗ ಶಿವರಾಜ್ ಅರಬ್ಬಿ ಗುಡ್ಡೆಯ ಗಣೇಶ ಸ್ಟೋರ ಅಂಗಡಿ ಹೋಗಿದ್ದಾನೆ.

ಅಲ್ಲಿ ಸಂತೋಷ್, ಅಕ್ಕ ಸಾರಿಕಾಳ ವಿಚಾರವನ್ನು ತೆಗೆದು ಮಾತನಾಡಲು ಪ್ರಾರಂಭಿಸಿದಾಗ, ಶಿವರಾಜ್ ಕುಲಾಲ್ ಐದು ವರ್ಷಗಳ ಹಿಂದಿನ ವಿಚಾರವಲ್ಲ ಎಂದು ಹೇಳಿದ್ದು. ಆಗ ಸಂತೋಷನು ನನ್ನ ಅಕ್ಕಳನ್ನು ಸಾಕಲು ಸಾಧ್ಯವಿದೆಯೇ ಎಂದು ಹೇಳಿ ಕೈಯಲ್ಲಿದ್ದ ಹರಿತವಾದ ಸಣ್ಣ ತಲವಾರುನಿಂದ ಶಿವರಾಜ್ ಕುಲಾಲ್ ಕುತ್ತಿಗೆಯ ಎಡಬದಿಗೆ ಬಲವಾಗಿ ಬೀಸಿದ ಪರಿಣಾಮ ಕುತ್ತಿಗೆಯ ಎಡಬದಿಗೆ ತಾಗಿ ಗಾಯವಾಗಿದೆ.

ಇದಲ್ಲದೆ ಮತ್ತೊಮ್ಮೆ ಬಲವಾಗಿ ಕಡಿಯಲು ಬಂದಾಗ ಶಿವರಾಜ್ ಎಡಕೈಯನ್ನು ಅಡ್ಡವಾಗಿ ಹಿಡಿದಾಗ ಎಡಕೈ ಮಣಿಗಂಟಿಗೆ ಬಿದ್ದು, ತುಂಡಾಗಿದೆ.ಇದನ್ನು ಕಂಡು ಆರೋಪಿ ಸಂತೋಷ್ ಅಲ್ಲಿಂದ ಪರಾರಿಯಾಗಿದ್ದಾನೆ.ಶಿವರಾಜ್ ಇದೀಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವರಾಜ್ ಕುಲಾಲ್ 5 ವರ್ಷಗಳ ಹಿಂದೆ ಆರೋಪಿ ಸಂತೋಷನ ಅಕ್ಕಳನ್ನು ಮದುವೆಯಾಗುವುದಾಗಿ ಹೇಳಿದ್ದ ಆದರೆ ಅದಕ್ಕೆ ಮನೆಯವರು ಒಪ್ಪದಿದ್ದಾಗ ಶಿವರಾಜ್ ಕುಲಾಲ್ ಆ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದಾರೆ.ಇದೇ ದ್ವೇಷದಿಂದ ಕೊಲೆಯತ್ನ ನಡೆದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com