ಬಂಟ್ವಾಳ;ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವರ ಸ್ಥಿತಿ ಗಂಭೀರವಾಗಿದೆ.
ಹೆಜ್ಜೇನು ದಾಳಿಯಿಂದ ಕಲ್ಪನೆ ನಿವಾಸಿ ಪೂವಪ್ಪ (61) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮಹೇಶ್ ಮತ್ತು ಗೋಪಾಲ್ ಎಂಬವರು ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಮನೆಯಿಂದ ಕಲ್ಪನೆ ಬಸ್ ನಿಲ್ದಾಣಕ್ಕೆ ಬರುವ ವೇಳೆ
ದಿಡೀರ್ ಬಂದ ನೊಣಗಳು ಅವರ ಮೇಲೆ ದಾಳಿ ಮಾಡಿವೆ.
ಈ ವೇಳೆ ಅಲ್ಲಿದ್ದ ರಿಕ್ಷಾ ಚಾಲಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.