ಬಂಟ್ವಾಳ; ಪತ್ನಿ & ಮಾವನಿಗೆ ಚೂರಿಯಿಂದ ಇರಿದು ಪತಿ ಪರಾರಿ

ಬಂಟ್ವಾಳ:ಪತ್ನಿ ಹಾಗೂ ಮಾವನಿಗೆ ದುಷ್ಕರ್ಮಿಯೋರ್ವ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ.

ಜೂನ್ 15 ರಂದು ರಾತ್ರಿ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಆಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ತೆರಳುವಾಗ ದಿವ್ಯಳ ಪತಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು ಚೂರಿಯಿಂದ ಪತ್ನಿಗೆ ಇರಿಯಲು ಯತ್ನಿಸಿದ್ದಾನೆ.ಈ ವೇಳೆ ಮಾವ ಬಿಡಿಸಲು ಹೋಗಿದ್ದು, ಮೂವರ ನಡುವೆ ತಳ್ಳಾಟ ನಡೆದಿದೆ.

ಘಟನೆಯಲ್ಲಿ ಗಾಯಗೊಂಡು ರಾಜೀವ ಹಾಗೂ ದಿವ್ಯ ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೌಟುಂಬಿಕ ಮನಸ್ಥಾಪದಿಂದ ಘಟನೆ ನಡೆದಿದೆ.

ಘಟನೆಯ ಕುರಿತು ಆಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ