ಮೊಬೈಲ್ ಗೆ ಬಂದ ಅಪ್ಡೇಟ್ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ ಎಕೌಂಟ್ ನಿಂದ 4 ಲಕ್ಷ ರೂ.ಮಾಯ!

ದಾವಣಗೆರೆ;ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು 4.15 ಲಕ್ಷ ರೂ. ಕಳೆದುಕೊಂಡಿರುವ ಘಟನೆ ದಾವಣಗೆರೆಯಿಂದ ವರದಿಯಾಗಿದೆ.

ದಾವಣಗೆರೆಯ ದೇವರಾಜ ಅರಸು ಬಡಾವಣೆ ನಿವಾಸಿಯಾಗಿರುವ ವಿರೂಪಾಕ್ಷಪ್ಪ ವಂಚನೆಗೆ ಒಳಗಾದವರು.

ಎಸ್.ಬಿ.ಐ. ನಲ್ಲಿ ಅವರು ಖಾತೆ ಹೊಂದಿದ್ದು, ಅವರ ಮೊಬೈಲ್ ಸಂಖ್ಯೆಗೆ ಜನವರಿ 21ರಂದು ರಾತ್ರಿ ಎಸ್‌ಎಂಎಸ್ ಬಂದಿದೆ.ಬ್ಯಾಂಕ್ ನ ಅಪ್ಲಿಕೇಷನ್ ನ್ ಅಪ್ಡೇಟಿಗೆ ಸೂಚಿಸಲಾಗಿದೆ. ಅದರಂತೆ ಲಿಂಕ್ ಒತ್ತಿದಾಗ
ಅವರ ಖಾತೆಯಿಂದ ಹಣ ಕಡಿತವಾದ ಸಂದೇಶ ಮೊಬೈಲ್ ಗೆ ಬಂದಿದೆ.

ಕೂಡಲೇ ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಿಂದ ಕ್ರಮವಾಗಿ 1.35 ಲಕ್ಷ ರೂ., 1 ಲಕ್ಷ ರೂ., 1.79 ಲಕ್ಷ ರೂ. ಸೇರಿದಂತೆ ಒಟ್ಟು 4.15 ಲಕ್ಷ ರೂ. ಕಡಿತವಾಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ಈ ಕುರಿತು ಬುಧವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com