ತಬಸ್ಸುಮ್ ಕೊಲೆಗೆ ಕಾರಣ ಪೊಲೀಸ್ ತನಿಖೆಯಲ್ಲಿ ಬಹಿರಂಗ; ಬೆಂಗಳೂರಿಗೆ ತೆರಳಿ ಸಂಸಾರ ನಡೆಸುತ್ತಿದ್ದವಳು ಕೊಲೆಯಾಗಿದ್ದೇಕೆ ಗೊತ್ತಾ?

ಬೆಂಗಳೂರು;ಪತಿಯನ್ನು ಬಿಟ್ಟು ಬಂದು ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ವಾಸಿಸುತ್ತಿದ್ದ ಮಹಿಳೆಯನ್ನು ಪತಿ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಕೋಲ್ಕತ್ತಾದ ನಿವಾಸಿಗಳಾದ ತಬಸ್ಸುಮ್‌ಗೆ ಪತಿ ಸಾಹಿಲ್ ಕೊಲೆ ಮಾಡಿದ್ದಾ‌ನೆ.14 ವರ್ಷಗಳ ಹಿಂದೆ ಕೋಲ್ಕತ್ತಾ ನಿವಾಸಿಗಳಾದ ತಬಸ್ಸುಮ್ ಹಾಗೂ ಶೇಕ್‌ ಸಾಹಿಲ್‌ ಗೆ ಮದುವೆ ಆಗಿತ್ತು.ದುಡಿಮೆಗಾಗಿ ಸಾಹಿಲ್ ಪತ್ನಿ ಜೊತೆ ಬೆಂಗಳೂರಿಗೆ ಬಂದಿದ್ದಾನೆ.ಆದರೆ ಬೆಂಗಳೂರಿನಲ್ಲಿ ತಬಸ್ಸುಮ್ ಗೆ ನೆರೆಯ ನಹೀಮ್ ಎಂಬವನ ಜೊತೆ ಪ್ರೀತಿ ಬೆಳೆದಿದೆ.ಇದನ್ನು ತಿಳಿದ ಸಾಹಿಲ್ ತಿಳಿದು ಪತ್ನಿಯನ್ನು ಕರೆದುಕೊಂಡು ಊರಿಗೆ ಹೋಗಿದ್ದ.

ಆದರೆ ತಬಸ್ಸುಮ್ ಕೋಲ್ಕಾತ್ತಾದಿಂದ ತಪ್ಪಿಸಿಕೊಂಡು ಬಂದು ಬೆಂಗಳೂರಿನಲ್ಲಿ ಪ್ರಿಯಕರ ನಯೀಮ್ ಜೊತೆ ವಾಸವಾಗಿದ್ದಳು.ಈ ಅಕ್ರಮ ಸಂಬಂಧದಲ್ಲಿ ಒಂದು‌ ಮಗು ಕೂಡ ಇದೆ ಎನ್ನಲಾಗಿದೆ.

ಶೇಕ್‌ ಸಾಹಿಲ್‌ ತನ್ನ ಪತ್ನಿ ತಬಸ್ಸುಮ್ ಗೆ ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿ, ಕಂಠಪೂರ್ತಿ ಕುಡಿದು ಸೀದಾ ನಯೀಮ್‌ ಮನೆಯ ಬಳಿ ತೆರಳಿ ಪತ್ನಿ ಜೊತೆ ಜಗಳವಾಡಿ ಕೊಲೆ ಮಾಡಿದ್ದಾನೆ.

ಇದೀಗ ಸಾಹಿಲ್ ಗೆ‌ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಕೊಲೆಗೆ ಕಾರಣ ಬಯಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com