ಬೆಂಗಳೂರು; ಆಟೋ ಚಾಲಕನೊಬ್ಬ ರಾಪಿಡೋ ಬೈಕ್ ಚಾಲಕನನ್ನು ತಡೆದು ಕಿರುಕುಳ ನೀಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ಆಟೋ ರಿಕ್ಷಾ ಚಾಲಕನೊಬ್ಬ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಚಿತ್ರೀಕರಿಸಿದ್ದಾನೆ ಎನ್ನಲಾದ ವಿಡಿಯೊದಲ್ಲಿ ರಾಪಿಡೋ ಬೈಕ್ ಚಾಲಕನ ಫೋನ್ ಕಸಿದುಕೊಂಡು ಕೋಪದ ಭರದಲ್ಲಿ ನೆಲಕ್ಕೆ ಫೋನ್ ನ್ನು ಎಸೆದು, ಆತನ ಬಗ್ಗೆ ನಿಂದನಾತ್ಮಕವಾಗಿ ಮಾತನಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಳಿಕ ಆಟೋ ಚಾಲಕ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಾನೆ. ಸ್ನೇಹಿತರೇ, ಅಕ್ರಮ ರಾಪಿಡೋ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿ.ಇವ ಬೇರೆ ದೇಶದಿಂದ ಬಂದು ರಾಜನಂತೆ ಓಡಿಸುತ್ತಾನೆ.ಆಟೋ ಇಲಾಖೆ ಎಷ್ಟು ಹಾಳಾಗಿದೆ ಮತ್ತು ಹೇಗೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಬೇರೆ ದೇಶದಿಂದ ಬಂದವನು, ವೈಟ್ ಬೋರ್ಡ್ ಹೊಂದಿದ್ದರೂ ಹುಡುಗಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ ಎಂದಲ್ಲ ಹೇಳಿಕೊಂಡಿದ್ದಾನೆ.
ಇದಲ್ಲದೆ ಆಟೋ ಚಾಲಕ ರಾಪಿಡೋ ಬೈಕ್ ಚಾಲಕನ ಮೇಲೆ ಕೈ ಮಾಡಲು ಮುಂದಾಗಿದ್ದಾನೆ.ಈ ಕುರಿತ ವಿಡಿಯೋ ವೈರಲ್ ಬೆನ್ನಲ್ಲೇ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ.ಪೊಲೀಸರು ಕೂಡ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.