ಹಿಟ್ & ರನ್ ಕೇಸ್; ತಂದೆ- ಮಗ ಸಾವು
ಬೆಂಗಳೂರು;ಹಿಟ್ ಆಂಡ್ ರನ್ ಅಪಘಾತಕ್ಕೆ ತಂದೆ – ಮಗ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್ನಲ್ಲಿ ಸಂಭವಿಸಿದೆ.
ರಘು ಮತ್ತು ಚಿರಂಜೀವಿ ಮೃತ ತಂದೆ ಹಾಗೂ ಮಗ. ಘಟನೆಯಲ್ಲಿ ವಾಸು ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತರು ಬೆಂಗಳೂರಿನ ಕುವೆಂಪು ನಗರದ ನಿವಾಸಿಗಳಾಗಿದ್ದು, ಪುಸ್ತಕ ವ್ಯಾಪಾರ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಹಿಂದಿರಗುವ ವೇಳೆ ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಬಂದಿದ್ದ ಮಾರುತಿ ಇಕೋ ನಿಂತಿದ್ದ ಕಾರು ಮತ್ತು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.