ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು ಪತ್ನಿ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪತಿ ಮಹಿಳೆಯರ ಒಳ ಉಡುಪು ಧರಿಸಿದ್ದ. ಇದನ್ನ ಪ್ರಶ್ನಿಸಿದರೆ ತನಗೆ ಗಂಡಸರು ಎಂದರೆ ತುಂಬಾ ಇಷ್ಟ ಅಂಥ ಹೇಳುತ್ತಿದಾನೆ ಎಂದು ಪತಿ ವಿರುದ್ಧ ಮಹಿಳೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ಕೊಟ್ಟಿರುವ ಬಗ್ಗೆ ವರದಿಯಾಗಿದೆ.
25 ವರ್ಷದ ಮಹಿಳೆ ದೂರು ನೀಡಿದ್ದು ಪತಿ ಮತ್ತು ಕುಟುಂಬದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪತಿ ಪ್ರಣವ್, ಮಾವ ಮೂರ್ತಿ ಹಾಗೂ ಅತ್ತೆ ಶ್ರೀದೇವಿ ಎಂಬುವರ ವಿರುದ್ದ ವರದಕ್ಷಣೆ ಕಿರುಕುಳದಡಿ ಕೂಡ ಪ್ರಕರಣ ದಾಖಲಿಸಲಾಗಿದೆ.
ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪ್ರಣವ್ ಪರಿಚಯಗೊಂಡಿದ್ದು, ತಾನು ಎಂಟೆಕ್ ಪದವೀಧರ ಎಂದು ಹೇಳಿದ್ದ.ಕುಟುಂಬದ ಸಮ್ಮುಖದಲ್ಲಿ 2020ರಲ್ಲಿ ಇಬ್ಬರ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 800 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ ಹಾಗೂ ಐದು ಲಕ್ಷ ಹಣ ನೀಡಲಾಗಿತ್ತು.
ಆದರೆ ಮೊದಲ ದಿನದಿಂದಲೇ ವಿಚಿತ್ರವಾಗಿ ಪತಿ ವರ್ತಿಸುತ್ತಾರೆ. ತಮಗೆ ಪುರುಷರೆಂದರೆ ಇಷ್ಟವೆಂದು ಕೂಗಾಡುತ್ತಾರೆ.ಅದನ್ನು ಪ್ರಶ್ನಿಸಿದರೆ ಮನೆ ಬಿಟ್ಟು ಹೋಗುವಂತೆ ಹಾಗೂ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ ಎಂದು ಆರೋಪಿಸಲಾಗಿದೆ.