ಬೆಂಗಳೂರು; ಸಂಜೆ ಮೋದಿ ರೋಡ್ ಶೋ ಹಿನ್ನೆಲೆ, ಬೆಳಿಗ್ಗೆಯೇ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ವಧು- ವರನಿಗೆ ತಡೆದ ಪೊಲೀಸರು

ಬೆಂಗಳೂರು;ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಸಂಜೆ 6 ಗಂಟೆಗೆ ರಸ್ತೆಯಲ್ಲಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ಸಂಚಾರ ಮಾಡುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ.ಇದರಿಂದ ಕಲ್ಯಾಣ ಮಂಟಪಕ್ಕೆ ಹೋಗಬೇಕಾದ ವಧು- ವರನಿಗೆ ಪೊಲೀಸರು ತಡೆದಿದ್ದು ಜನರ ಆಕ್ರೋಶಕ್ಕೆ‌ ಕಾರಣವಾಗಿದೆ.

ಮದುಮಗ ಸರ್‌ ತನ್ನ ಮದುವೆಯಿದ್ದು, ಚೌಟ್ರಿ ಹೋಗಬೇಕು ಬ್ಯಾರಿಕೇಡ್‌ ತೆರೆದು ನನ್ನನ್ನು ಹೋಗಲು ಬಿಡಿ ಎಂದರೂ ಬಿಡದೇ ಮದುಮಗನನ್ನು ಅಡ್ಡಗಟ್ಟಿದ್ದಾರೆ.

ಸುಂಕದಕಟ್ಟೆ ರಸ್ತೆಯಲ್ಲಿರುವ ಅಕ್ಷಯ್ ಚೌಟ್ರಿಯ ಬಳಿ ಘಟನೆ ನಡೆದಿದೆ. ನೈಸ್ ರೋಡ್ ಜಂಕ್ಷನ್ ಬಳಿ ಕಲ್ಯಾಣ ಮಂಟಪಕ್ಕೆ ತೆರಳು ಬಂದ ಮದು ಮಗನ ಕಾರಿಗೆ ಪೊಲೀಸರು ತಡೆಯೊಡ್ಡಿದ್ದಾರೆ. ಪೊಲೀಸರು ತಡೆ ನೀಡಿದ ಹಿನ್ನೆಲೆಯಲ್ಲಿ ತಾನೇ ಖುದ್ದು ಕಾರಿನಿಂದ ಇಳಿದು, ಇದೇ ರಸ್ತೆಯಲ್ಲೇ ಚೌಟ್ರಿ ಇದೆ ಸರ್. ನಮ್ಮನ್ನು ಮದುವೆ ಕಾರ್ಯಕ್ರಮಕ್ಕೆ ಹೋಗಲು ಬಿಡುವಂತೆ ಮದುಮಗ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಸಂಜೆ ಇರುವ ಹಿನ್ನೆಲೆಯಲ್ಲಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆ ಬ್ಲಾಕ್ ಮಾಡಲಾಗಿದೆ ಎಂದು ಅಡ್ಡಗಟ್ಟಿದ್ದಾರೆ.

ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಮದುಮಗನನ್ನು ರುದ್ರೇಶ್‌ ಎಂದು ಗುರುತಿಸಲಾಗಿದೆ. ಆದರೆ ಮದುವೆ ಮಾಡಿಕೊಳ್ಳಲು ಹೋಗುತ್ತಿದ್ದ ವರನನ್ನು ತಡೆದು ನಿಲ್ಲಿಸಿದ ಹಿನ್ನೆಲೆಯಲ್ಲಿ ಮದುಮಗ ಹಾಗೂ ಅವರ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮದುಮಗಳನ್ನು ಕೂಡ ಪೊಲೀಸರು ತಡೆದಿದ್ದು, ಕೊನೆಗೆ ಸ್ಕೂಟರ್ ನಲ್ಲಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com