ಬೆಂಗಳೂರು; ಪೊಲೀಸರೆಂದು ಬೆದರಿಸಿ ಚಿನ್ನದ ವ್ಯಾಪಾರಿಗಳಿಂದ 1ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ

ರಾಯಚೂರು;ಚಿನ್ನದ ವ್ಯಾಪಾರಸ್ಥರು ಗಟ್ಟಿ ಚಿನ್ನ ಖರೀದಿಸಿ ಕೊಂಡೊಯ್ಯುತ್ತಿದ್ದಾಗ ಪೊಲೀಸರಂತೆ ಬಂದು ಚಿನ್ನ ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.

1.12 ಕೋಟಿ ರೂ. ಮೌಲ್ಯದ 2 ಕೆ.ಜಿ. 200 ಗ್ರಾಂ ತೂಕದ ಗಟ್ಟಿ ದರೋಡೆ ನಡೆದಿದೆ.ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿ ಚಿನ್ನದ ವ್ಯಾಪಾರಸ್ಥರಿಂದ ಗಟ್ಟಿ ಚಿನ್ನವನ್ನು ದೋಚಿಕೊಂಡು ಹೋಗಲಾಗಿದೆ.

ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಮತ್ತು ಸುನಿಲ್ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಬಂದಿದ್ದರು.ಚಿನ್ನ ಖರೀದಿಸಿ ಬೆಂಗಳೂರಿನಿಂದ ಬರಲು ಹೊರಡುವಾಗ ಆನಂದ್ ರಾವ್ ಸರ್ಕಲ್ ಬಳಿ ಪೊಲೀಸರೆಂದು ನಕಲಿ ಐಡಿ ಕಾರ್ಡ್‌ ನ್ನು ತೋರಿಸಿ ಚಿನ್ನವನ್ನು ಹಿಡಿದುಕೊಂಡಿದ್ದವರನ್ನು ಕರೆದುಕೊಂಡು ಕತ್ತಲೆಯಿರುವ ಜನನಿಬಿಡ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಇಬ್ಬರ ಬಳಿಯಿದ್ದ ಚಿನ್ನದ ಬ್ಯಾಗ್‌ಗಳನ್ನು ಕಸಿದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಹೋಗುವಂತೆ ಹೇಳಿ ಹೊರಟು ಹೋಗಿದ್ದಾರೆ.

ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com