ಮಗುವನ್ನು‌ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ; ಹೃದಯವಿದ್ರಾಹಕ ಘಟನೆ

ಮಗುವನ್ನು‌ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಯುವತಿ; ಹೃದಯವಿದ್ರಾಹಕ ಘಟನೆ

ಬೆಂಗಳೂರು:ಮಗುವನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೆಚ್​ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ನಡೆದಿದೆ.

ಸಂಯುಕ್ತಾ ಮೃತ ಮಗು.‌ಈಕೆಯ ತಾಯಿ ಗಾಯತ್ರಿ,ನೀರಿನ ಟಬ್​​ನಲ್ಲಿ ಮುಳಗಿಸಿ ಮಗುವನ್ನು ಕೊಂದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಪ್ರಜ್ಞೆ ಇಲ್ಲದೆ ಬಿದ್ದಿದ್ದ ಗಾಯತ್ರಿಯನ್ನು ಪತಿ ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಷ್ಟಗಳನ್ನು ಎದುರಿಸಲು ಆಗುತ್ತಿಲ್ಲ ಎಂದು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.‌ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ಟಾಪ್ ನ್ಯೂಸ್