ಪತಿ ಮನೆಯಿಂದ ಚಿನ್ನಾಭರಣ, ಲಕ್ಷಾಂತರ ಹಣ ತೆಗೆದುಕೊಂಡು ವಧು ಪರಾರಿ; ಬೆಂಗಳೂರಿನ ಮನೆಯೊಂದಕ್ಕೆ ಪ್ರೀತಿಯಿಂದ ತಂದ ಸೊಸೆ‌ ಖತರ್ನಾಕ್ ಕಳ್ಳಿ!

ಪತಿ ಮನೆಯಿಂದ ಚಿನ್ನಾಭರಣ,ಲಕ್ಷಾಂತರ ಹಣ ತೆಗೆದುಕೊಂಡು ವಧು ಪರಾರಿ;ಬೆಂಗಳೂರಿನ ಮನೆಯೊಂದಕ್ಕೆ ಪ್ರೀತಿಯಿಂದ ತಂದ ಸೊಸೆ‌ ಖತರ್ನಾಕ್ ಕಳ್ಳಿ!




ಬೆಂಗಳೂರು:ಪತಿ ಮನೆಯಿಂದ ಚಿನ್ನಾಭರಣ,ಹಣ ತೆಗೆದುಕೊಂಡು ಸೊಸೆ ಪರಾರಿಯಾಗಿರುವ ಬಗ್ಗೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಗೌತಮಿ ಪರಾರಿಯಾದ ನವವಿವಾಹಿತೆ.
ಸೊಸೆಯ ವರ್ತನೆಗೆ ರೋಸಿ ಹೋಗಿದ್ದ ನೊಂದ ಕುಟುಂಬ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಮದುವೆಯಾದ ಬಳಿಕ ಮಗನ ಜೊತೆ ಸೊಸೆಯನ್ನ ಅಮೆರಿಕಾಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಗೌತಮಿ ಮದುವೆಗೂ ಮುಂಚೆ ಅಮೆರಿಕಾಗೆ ಹೋಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಳು.ಆದರೆ ಮದುವೆಯಾದ ಬಳಿಕ ನಿರಾಕರಿಸಿದ್ದಾಳೆ.ಆಕೆಗೆ ವೀಸಾ,ಟಿಕೆಟ್ ಎಲ್ಲವೂ ಹಣ ಕೊಟ್ಟು ರೆಡಿ ಮಾಡಿದ್ದರು.ಆದರೆ ಗೌತಮಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೋಗದೆ ಪತಿಯ ಮನೆಯಲ್ಲಿದ್ದ ಹಣ, ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಗಂಡನ ಮನೆಯಲ್ಲಿದ್ದ 10ಲಕ್ಷ ಹಣ,ಚಿನ್ನಾಭರಣ ಹಾಗೂ ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ
ಕೋಟ್ಯಂತರ ರೂ.ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಾಳೆ.



ಹೀಗಾಗಿ ಪತಿ ಕುಟುಂಬ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಗೌತಮಿ ಮತ್ತು ಆಕೆಯನ್ನು ಮದುವೆ ಮಾಡಿಸಿಕೊಟ್ಟವರ ಮೇಲೂ ಕೇಸ್ ದಾಖಲಿಸಿದ್ದಾರೆ.






ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು