BIG NEWS ಬೆಂಗಳೂರು; ಕಂಪೆನಿಯೊಂದಕ್ಕೆ ನುಗ್ಗಿ ಎಂಡಿ & ಸಿಇಒಗೆ ಬರ್ಬರವಾಗಿ ಕೊಲೆ ಮಾಡಿದ ಮಾಜಿ ಉದ್ಯೋಗಿ

ಬೆಂಗಳೂರು:ಏರೋನಿಕ್ಸ್ ಇಂಟರ್ನೆಟ್ ಕಂಪನಿಯ ಎಂಡಿ ಫಣಿಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಅವರನ್ನು ಕಂಪನಿಯ ಮಾಜಿ ಉದ್ಯೋಗಿಯೋರ್ವ ಕೊಲೆ ಮಾಡಿರುವ ಘಟನೆ ನಡೆದಿದೆ.

ಫೆಲಿಕ್ಸ್ ಎಂಬಾತ ಕೊಲೆ ಮಾಡಿದ್ದು ಘಟನೆ ಬೆಂಗಳೂರು ನಗರದ ಅಮೃತಹಳ್ಳಿಯಲ್ಲಿ ಇಂದು ನಡೆದಿದೆ.

ಏರೋನಿಕ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಫೆಲಿಕ್ಸ್, ಕಂಪನಿಯಿಂದ ಹೊರಬಂದು ಸ್ವಂತ ಕಂಪನಿ ಸ್ಥಾಪಿಸಿದ್ದ. ಈ ಉದ್ಯಮಕ್ಕೆ ಪಣೀಂದ್ರ ಎದುರಾಳಿ ಎಂದು ಫೆಲಿಕ್ಸ್ ಫಣೀಂದ್ರರನ್ನು ಕೊಲೆ ಮಾಡಿದ್ದಾನೆ.

ಪಂಪಾ ಬಡವಾಣೆಯಲ್ಲಿರುವ ಏರೋನಿಕ್ಸ್ ಕಂಪನಿಗೆ ಇಂದು ಸಂಜೆ 4 ಗಂಟೆಗೆ ಆಗಮಿಸಿ ಪಣೀಂದ್ರ ಹಾಗೂ ವಿನುಕುಮಾರ್ ಮೇಲೆ ತಲ್ವಾರ್​ನಿಂದ ಹಲ್ಲೆ ನಡೆಸಿ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.

ತಲ್ವಾರ್ ಮತ್ತು ಚಾಕುವಿನ ಇರಿತದಿಂದ ಗಂಭೀರವಾಗಿ ಗಾಯಗೊಂಡ ಫಣೀಂದ್ರ ಮತ್ತು ವಿನುಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಮೃತಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಫಣಿಂದ್ರ, ವಿನುಕುಮಾರ್ ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ