ಬೆಂಗಳೂರು:ಬಿಎಂಟಿಸಿ ಬಸ್ನಲ್ಲಿ ಅಗ್ನಿ ಅನಾಹುತ ನಡೆದು ಬಸ್ ನಲ್ಲಿ ನಿದ್ರಿಸುತ್ತಿದ್ದ ಕಂಡಕ್ಟರ್ ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮುತ್ತಯ್ಯಸ್ವಾಮಿ ಮೃತದ ದುರ್ವೈವಿ(45).ಬೆಳಗಿನ ಜಾವ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.ಬಸ್ನಲ್ಲೇ ನಿದ್ರೆಗೆ ಜಾರಿದ್ದ ಕಂಡಕ್ಟರ್ ಸುಟ್ಟು ಕರಕಲಾಗಿದ್ದಾರೆ.
ರಾತ್ರಿ ಕೆಲಸ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ನಲ್ಲಿ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು.ಬೆಳಗ್ಗೆ ಚಾಲಕ ಪ್ರಕಾಶ್ ಎದ್ದು ಶೌಚಕ್ಕೆ ಹೋದಾಗ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಶೌಚಕ್ಕೆ ಹೋಗಿದ್ದ ಬಸ್ ಚಾಲಕ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.