ಕಸದ ರಾಶಿಯಲ್ಲಿ ಎಸೆದಿದ್ದ ಹಸುಗೂಸಿನ ಮೇಲೆ ಹರಿದ ವಾಹನ, ಮಗು ಮೃತ್ಯು

ಬೆಂಗಳೂರು;ಕಸದ ರಾಶಿಯಲ್ಲಿ ಎಸೆದಿದ್ದ ಹಸುಗೂಸಿನ ಮೇಲೆ ವಾಹನ ಹರಿದು ಮಗು ಮೃತಪಟ್ಟಿರುವ ಘಟನೆ ಅಮೃತಹಳ್ಳಿಯ ಪಂಪಾ ಲೇಔಟಿನಲ್ಲಿ ನಡೆದಿದೆ‌.

ನಾಲ್ಕೈದು ತಿಂಗಳ ಮಗುವನ್ನ ಯಾರೋ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಕಸದ ಲಾರಿಯಲ್ಲಿರಿಸಿದ್ದು,‌ ಲಾರಿ ಸಾಗುವಾಗ ಕವರ್ ನೆಲಕ್ಕೆ ಬಿದ್ದಿದೆ. ಪ್ಲಾಸ್ಟಿಕ್‌ ಕವರಿನೊಳಗೆ ಮಗು ಇರುವುದನ್ನ ಗಮನಿಸದೇ ಅದರ ಮೇಲೆ ವಾಹನಗಳು ಹರಿದ ಪರಿಣಾಮ ಮಗು ಸಾವನ್ನಪ್ಪಿದೆ.

ಮಗುವಿನ ದೇಹ ಛಿದ್ರವಾಗಿರುವ ಕಾರಣ ಮಗು ಗಂಡೋ ಹೆಣ್ಣೋ ಎಂಬುದನ್ನ ತಿಳಿಯುವುದು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಅನ್ವಯ ಪೊಲೀಸರು ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್