ಪ್ರಿಯಕರನಿಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ; ಆತನಿಗೆ ಮದುವೆಯಾಗಿದೆ, ನಾವು ಸೇರಿಸಿಕೊಳ್ಳಲ್ಲ ಎಂದ ತಾಯಿ

ಪ್ರಿಯಕರನಿಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ; ಆತನಿಗೆ ಮದುವೆಯಗಿದೆ, ನಾವು ಸೇರಿಸಿಕೊಳ್ಳಲ್ಲ ಎಂದ ತಾಯಿ

ರಾಜಸ್ಥಾನ; ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಗಡಿ ದಾಟಿ ಬಂದು ಸುದ್ದಿಯಾಗಿದ್ದಾರೆ.

ಹಬೀಬಾ ಅಲಿಯಾಸ್​ ಹನಿ ಬಾಂಗ್ಲಾದೇಶದಿಂದ ಬಂದ ಯುವತಿ.

ಈಕೆ ಕಳೆದ ಎರಡು ದಿನಗಳ ಹಿಂದೆ ಅನೂಪ್​ಗಢ ಜಿಲ್ಲೆಯ 13 ಡಾಲ್​ ಗ್ರಾಮದ ರಾವ್ಲ ಮಂಡಿಗೆ ಆಗಮಿಸಿದ್ದು, ಗೆಳೆಯನ ಮನೆಯಲ್ಲಿ ವಾಸವಿದ್ದಳು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದ ಹನಿ ಮತ್ತು ರೋಶನ್​ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿದ್ದಾರೆ. ಇವರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದೆ. ಇದರಿಂದ ಪ್ರಿಯಕರನಿಗೆ ಹುಡುಕಿಕೊಂಡು ಹನಿ ಬಾಂಗ್ಲಾದಿಂದ ಭಾರತಕ್ಕೆ ಬಂದಿದ್ದಾರೆ.

ಪೊಲೀಸರು ಈ ಸಂಬಂಧ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹನಿ ಬಾಂಗ್ಲಾದೇಶದಿಂದ ಕೊಲ್ಕತಾ- ದೆಹಲಿ ಮಾರ್ಗವಾಗಿ ಬಿಕನೇರ್ ಗೆ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಶನ್​ ತಾಯಿ, ರೋಶನ್​ಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದೆ. ಈತನಿಗೆ 7 ತಿಂಗಳ ಮಗುವಿದೆ. ಅವಳನ್ನು ನಾವು ಇಲ್ಲಿ ಇರಲು ಬಯಸುವುದಿಲ್ಲ, ಬಾಂಗ್ಲಕ್ಕೆ ಕಳುಹಿಸಿ ಕೊಡಬೇಕು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್