ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಹೊತ್ತು ತಂದ ಮಗಳು; ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ ವರದಿ

ಬೆಂಗಳೂರು;ತಾಯಿಯನ್ನು ಕೊಂದ ಆಕೆಯ ಶವವನ್ನು ಸೂಟ್​ಕೇಸ್​ನಲ್ಲಿಟ್ಟು ಪೊಲೀಸ್​ ಠಾಣೆಗೆ ಮಗಳೋರ್ವಳು ತಂದಿದ್ದು, ಪೊಲೀಸರು ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ.

ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಬಂಗಾಳ ಮೂಲದ ಬೀವಾ ಪಾಲ್ (70) ಎಂಬ ಮಹಿಳೆಗೆ ಸೆನಾ ಸೇನ್ (39) ಎಂಬ ಸ್ವಂತ ಮಗಳು ಕೊಲೆ ಮಾಡಿದ್ದಾಳೆ.

ಮೊದಲು ತಾಯಿಗೆ 20 ನಿದ್ರೆ ಮಾತ್ರೆಯನ್ನು ಸೆನಾಲಿ ಕೊಟ್ಟಿದ್ದಾಳೆ. ಬಳಿಕ ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಟ್ರ್ಯಾಲಿ ಸೂಟ್​ಕೇಸ್​ನಲ್ಲಿ ತಾಯಿಯ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಸ್ಟೇಷನ್​ಗೆ ಹೊತ್ತು ತಂದಿದ್ದಾಳೆ.

ಟ್ರ್ಯಾಲಿ ಸೂಟ್​ಕೇಸ್​ನಲ್ಲಿ ತಾಯಿಯ ಶವದ ಜೊತೆಗೆ ತಂದೆಯ ಫೋಟೋ ಕೂಡ ಇಟ್ಟುಕೊಂಡು ಸ್ಟೇಷನ್​ಗೆ ಹೊತ್ತು ತಂದಿದ್ದಾಳೆ.

ಪ್ರತಿಷ್ಟಿತ ಅಪಾರ್ಟ್​ಮೆಂಟ್​ನಿಂದ ತಾಯಿಯ ಮೃತದೇಹವನ್ನು ಹೊತ್ತು ಮೈಕೊಲೇಔಟ್ ಪೊಲೀಸ್ ಠಾಣೆಗೆ ಆರೋಪಿ ಬಂದು ಶರಣಾಗಿದ್ದಾಳೆ. ಸೆನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.ಆಕೆಯನ್ನು ಬಂಧಿಸಿದ್ದಾರೆ.ಆಕೆಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಟಾಪ್ ನ್ಯೂಸ್