ಮುಂಬೈ;ಜೈ ಶ್ರೀರಾಮ್,’ಲವ್ ಜಿಹಾದ್ ನಿಷೇಧಿಸಿ’ಎಂದು ಘೋಷಣೆಗಳನ್ನು ಕೂಗುತ್ತಾ ಬಾಲಕನಿಗೆ ಸಂಘಪರಿವಾರದ ಗುಂಪು ಥಳಿಸಿದ ಘಟನೆ ಮಂಬೈಯ ಬಾಂದ್ರಾ ಟರ್ಮಿನಲ್ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿದ ಗುಂಪು ಬಾಲಕನನ್ನು ರೈಲ್ವೆ ನಿಲ್ದಾಣದಿಂದ ಹೊರಗೆ ಎಳೆದುಕೊಂಡು ಬರುತ್ತಿರುವುದು, ಥಳಿಸುತ್ತಿರುವುದು ಹಾಗೂ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.
ಗುಂಪು ಬಾಲಕನಿಗೆ ಥಳಿಸಿದ ಬಳಿಕ ಬಾಂದ್ರಾದಲ್ಲಿರುವ ನಿರ್ಮಲ ನಗರ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಪೊಲೀಸ್ ಉಪ ಆಯುಕ್ತ ದೀಕ್ಷಿತ್ ಗೇಡಂ, ಘಟನೆ ಜುಲೈ 21ರಂದು ನಡೆದಿದೆ.ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಎಂದು ಹೇಳಿದ್ದಾರೆ.
ನಿರ್ಮಲ ನಗರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಈ ಕುರಿತು ಮಾತನಾಡಿ, ಬಾಲಕ ಹಾಗೂ ಬಾಲಕಿ ಥಾಣೆ ಜಿಲ್ಲೆಯ ಅಂಬರನಾಥ್ನಲ್ಲಿರುವ ತಮ್ಮ ಮನೆಯಿಂದ ಓಡಿ ಹೋಗಿದ್ದಾರೆ.ಈ ಹಿನ್ನೆಲೆಯಲ್ಲಿ ಬಾಲಕನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.