ಪೊಲೀಸರನ್ನು ಕಂಡು ಗಾಬರಿಗೊಂಡ ಬೈಕ್ ಸವಾರ; ಪ್ಲೈ ಓವರ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ 40 ಅಡಿ ಆಳದ ರಸ್ತೆಗೆ ಬಿದ್ದು ಯುವಕ‌ ಮೃತ್ಯು, ಇನ್ನೋರ್ವ ಗಂಭೀರ

ಅಬ್ದುಲ್ ಅಹದ್ ಶೇಕ್(18)ಮೃತ ದುರ್ದೈವಿ.ಬೈಕ್ ಸವಾರ 17 ವರ್ಷದ ಯುವಕ ಗಂಭೀರವಾಗಿದ್ದಾನೆ.

ಮುಂಬೈ;ಬೈಕ್ ಸವಾರ ಪೊಲೀಸರನ್ನು ಕಂಡು ಗಾಬರಿಗೊಂಡು ಯು ಟರ್ನ್ ಹೊಡೆದು ವೇಗದಿಂದ ಬೈಕ್ ಚಲಾಯಿಸಿದಾಗ ಬೈಕ್ ಫ್ಲೈಓವರ್ ನ ಗೋಡೆಗೆ ಡಿಕ್ಕಿ ಹೊಡೆದು 40 ಅಡಿ ಆಳದ ರಸ್ತೆಗೆ ಬಿದ್ದು ಓರ್ವ ಯುವಕ ಮೃತಪಟ್ಟ ಘಟನೆ ಮುಂಬೈನ ಬಾಂದ್ರಾ ಮೇಲ್ಸೇತುವೆಯಲ್ಲಿ ನಡೆದಿದೆ.

ಬೈಕ್ ಸಹಸವಾರ ಅಬ್ದುಲ್ ಅಹದ್ ಶೇಕ್(18)ಮೃತ ದುರ್ದೈವಿ.ಬೈಕ್ ಸವಾರ 17 ವರ್ಷದ ಯುವಕ ಗಂಭೀರವಾಗಿದ್ದಾನೆ.ಆತನಿಗೆ ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ನಸುಕಿನ ವೇಳೆ ಬಾಂದ್ರಾ ಫ್ಲೈಓವರ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.ಈ ವೇಳೆ ಬೈಕ್ ನಲ್ಲಿ ಬಂದ ಯುವಕರು ಸೇತುವೆಯಲ್ಲಿ ಪೊಲೀಸರನ್ನು ಕಂಡು ಕೂಡಲೇ ಬೈಕ್ ನ್ನು ತಿರುಗಿಸಿ ವೇಗವಾಗಿ ಹೊರಟಿದ್ದರು. ಆಗ ಬೈಕ್ ಫ್ಲೈಓವರ್ ಗೆ ಡಿಕ್ಕಿ ಹೊಡೆದು ಇಬ್ಬರು 40 ಅಡಿ ಆಳದ ರಸ್ತೆಗೆ ಎಸೆಯಲ್ಪಟ್ಟಿದ್ದರು.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com