ವಿಶ್ವದ 4ನೇ ಶ್ರೀಮಂತ ನಟ ಶಾರುಕ್ ಖಾನ್; ಶ್ರೀಮಂತ ನಟರ ಪಟ್ಟಿಯಲ್ಲಿರುವ ಶಾರುಕ್ ಖಾನ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ನಾಲ್ಕನೆ ಸ್ಥಾನ ಪಡೆದುಕೊಂಡಿದ್ದಾರೆ.

ಖಾನ್ ಅವರ ನಿವ್ವಳ ಮೌಲ್ಯ 770 ಮಿಲಿಯನ್ ಡಾಲರ್ ಆಗಿದ್ದು ಅವರು ವಿಶ್ವದ ನಾಲ್ಕನೆ ಸಿರಿವಂತ ನಟರಾಗಿ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರಿಗಿಂತ ಹೆಚ್ಚು ಶ್ರೀಮಂತ ನಟ ಶಾರೂಖ್ ಖಾನ್ ಆಗಿದ್ದಾರೆ.

ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಅಗ್ರ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಕ್ ಖಾನ್ ಕಾಣಿಸಿಕೊಂಡಿದ್ದಾರೆ. 6,306 ಕೋಟಿ ನಿವ್ವಳ ಮೌಲ್ಯದೊಂದಿಗೆ ಅವರು ಪಟ್ಟಿಯಲ್ಲಿರುವ ಏಕೈಕ ಭಾರತೀಯ ನಟರಾಗಿದ್ದಾರೆ.

ಟಾಪ್ ನ್ಯೂಸ್