ಬೆಳ್ತಂಗಡಿ; ಆಂಬ್ಯುಲೆನ್ಸ್ ನಲ್ಲಿ ಗೆಳೆಯರ ಜೊತೆ ಪ್ರವಾಸ ಬಂದ ಯುವಕ

ಬೆಳ್ತಂಗಡಿ: ಆ್ಯಂಬುಲೆನ್ಸ್ ನಲ್ಲಿ ವ್ಯಕ್ತಿಯೋರ್ವ ಗೆಳೆಯರ ಜೊತೆ ಪ್ರವಾಸಕ್ಕೆ ಬಂದು ಸಿಕ್ಕಿ ಹಾಕಿಕೊಂಡ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಉಜಿರೆ ಎಂಬಲ್ಲಿ ನಡೆದಿದೆ.

ತ್ಯಾಗರಾಜ್ ಎಂಬಾತ 6 ಮಂದಿ ಗೆಳೆಯರನ್ನು ಆ್ಯಂಬುಲೆನ್ಸ್ ನಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ,ಉಡುಪಿ ದೇವಸ್ಥಾನಕ್ಕೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ.

ಇವರು ಕೊಟ್ಟಿಗೆಹಾರ ಆಗಿ ಉಜಿರೆಗೆ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಲಭಿಸಿದ್ದು, ವಾಹನವನ್ನು ಅಡ್ಡ ಹಾಕಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆ್ಯಂಬುಲೆನ್ಸ್ ನ್ನು ಠಾಣೆಗೆ ತಂದು ವಿಚಾರಿಸಿದಾಗ ಗೆಳೆಯರ ಜೊತೆ ದೇವಸ್ಥಾನಕ್ಕೆ ಟ್ರಿಪ್ ಹೊರಟಿರುವುದು ಬಯಲಾಗಿದೆ. ಈ ವೇಳೆ ಚಾಲಕನಿಗೆ ದಂಡ ಹಾಕಿದ ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು