ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದ್ದೂರಿ ವಿವಾಹ ಸಂಭ್ರಮದಲ್ಲಿ ಬಾಲಿವುಡ್ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.
ಅಥಿಯಾ ಹಾಗೂ ಕೆ.ಎಲ್ ರಾಹುಲ್ ದಂಪತಿಗೆ ನಟ ಸುನೀಲ್ ಶೆಟ್ಟಿ 50 ಕೋಟಿ ಮೌಲ್ಯದ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ.
ಸಲ್ಮಾನ್ ಖಾನ್ ಅಥಿಯಾಗೆ 1.64 ಕೋಟಿ ಮೌಲ್ಯದ ಐಷಾರಾಮಿ ಆಡಿ ಕಾರನ್ನ ಗಿಫ್ಟ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ನಟ ಜಾಕಿ ಶ್ರಾಫ್ ವಧುವಿಗೆ 30 ಲಕ್ಷ ಮೌಲ್ಯದ ಚೋಪರ್ಡ್ ವಾಚ್ ಹಾಗೂ ಅರ್ಜುನ್ ಕಪೂರ್ 1.5 ಕೋಟಿ ಮೌಲ್ಯದ ವಜ್ರದ ಬಳೆಗಳನ್ನ ನೀಡಿದ್ದಾರೆ.
ಇನ್ನೂ ಕೆ.ಎಲ್. ರಾಹುಲ್‌ಗೆ ಟೀಂ ಇಂಡಿಯ ಮಾಜಿ ನಾಯಕರಾದ ವಿರಾಟ್ ಕೊಹ್ಲಿ 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ನೀಡಿದ್ರೆ, ಎಂ.ಎಸ್ ಧೋನಿ 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.