ಬಿಲ್ಕೀಸ್ ಬಾನು ಪ್ರಕರಣ; ಆರೋಪಿಗಳ ಬಿಡುಗಡೆಯಿಂದ ಭಯಗೊಂಡು ಗ್ರಾಮ ತೊರೆದ ಹಲವು ಕಟುಂಬಗಳು!

ಬಿಲ್ಕೀಸ್ ಬಾನು ಪ್ರಕರಣ;ಆರೋಪಿಗಳ ಬಿಡುಗಡೆಯಿಂದ ಭಯಗೊಂಡು ಗ್ರಾಮ ತೊರೆದ ಹಲವು ಕಟುಂಬಗಳು!

ನವದೆಹಲಿ:ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು 7 ಸಂಬಂಧಿಕರ ಹತ್ಯೆಗೆ ಸಂಬಂಧಿಸಿ ಜೈಲಿನಲ್ಲಿದ್ದ 11 ಅಪರಾಧಿಗಳ ಬಿಡುಗಡೆಗೆ ಹಿನ್ನೆಲೆ ಗುಜರಾತ್ ನ ರಂಧಿಕ್‌ಪುರ ಗ್ರಾಮದ ಮುಸ್ಲಿಮರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸುತ್ತಿದ್ದಾರೆ.

ರಂಧಿಕ್ ಪುರ ಗ್ರಾಮಸ್ಥರು ಅತ್ಯಾಚಾರಿಗಳು ಮತ್ತೆ ಜೈಲಿಗೆ ಹೋಗದೆ ತಮ್ಮ ಗ್ರಾಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ರಂಧಿಕ್ ಪುರ ಗ್ರಾಮಸ್ಥರು ದೇವಗಢ್ ಬರಿಯಾಗೆ ವಲಸೆ ಹೋಗಿದ್ದಾರೆ.ವಲಸೆ ಹೋಗಿರುವ ಗ್ರಾಮಸ್ಥರು ಅಪರಾಧಿಗಳನ್ನು ಮತ್ತೆ ಜೈಲಿನಲ್ಲಿಡುವಂತೆ ಗುಜರಾತ್ ಸರಕಾರವನ್ನು ಒತ್ತಾಯಿಸಿದ್ದಾರೆ‌

ಬಿಲ್ಕಿಸ್ ಬಾನು ಹಾಗೂ ಅವರ ಕುಟುಂಬ ಕೂಡ ದೇವಗಢ್ ಬರಿಯಾದಲ್ಲಿ ಈಗ ವಾಸಿಸುತ್ತಿದ್ದಾರೆ.ಆ ಗ್ರಾಮದ ಮುಸ್ಲಿಂ ಕುಟುಂಬಗಳು ತಮ್ಮ ಗ್ರಾಮಕ್ಕೆ ಮರಳಲು ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.

ಈ ಬಗ್ಗೆ ಗ್ರಾಮಸ್ಥ ಸಮೀರ್ ಘಾಚಿ ಅವರು ಮಾತನಾಡಿ, ನಮ್ಮ ಮನೆಯ 12 ಸದಸ್ಯರು ಗ್ರಾಮವನ್ನು ತೊರೆದು ದೇವಗಢ್ ಬರಿಯಾದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದೇವೆ.ನಮಗೆ ಅಲ್ಲಿ ಭಯವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಸರಕಾರ ಸನ್ನಡತೆ ಆಧಾರದಲ್ಲಿ ಅಪರಾಧಿಗಳ ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.ಈ ಕುರಿತು ಗುಜರಾತ್ ಸರಕಾರಕ್ಕೆ ನೊಟೀಸ್ ಕೂಡ ನೀಡಿದೆ.

ಟಾಪ್ ನ್ಯೂಸ್