30 ಎಕ್ರೆ ಜಮೀನು, ತನ್ನ ಐಷಾರಾಮಿ ಮನೆಯನ್ನು ಕೆಲಸಗಾರರಿಗೆ ದಾನ ಮಾಡಿದ ಉದ್ಯಮಿ!

ಮುಕ್ತಸರ ಸಾಹಿಬ್‌ನ ಬಾಮ್ ಗ್ರಾಮದ ನಿವಾಸಿ 87 ವರ್ಷದ ಬಲ್ಜಿತ್ ಸಿಂಗ್ ಮಾನ್ ಅವರು ತಮ್ಮ ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿಯನ್ನು ತನ್ನ ಸಿಬ್ಬಂದಿಗೆ ದಾನ ಮಾಡಿ ಸುದ್ದಿಯಾಗಿದ್ದಾರೆ‌.

ತನ್ನ 30 ಎಕರೆ ಜಮೀನು, ಮನೆಗಳು ಹಾಗೂ ಐಷಾರಾಮಿ ವಾಹನಗಳನ್ನು ತನ್ನ ಸೇವಕರ ಹೆಸರಿಗೆ ಬರೆದು ಬಲ್ಜಿತ್ ಸಿಂಗ್ ಬರೆದುಕೊಟ್ಟಿದ್ದಾರೆ.

2011ರಲ್ಲಿ ತನ್ನ ಪತ್ನಿಯ ಮರಣದ ನಂತರ ಅವರು ಒಂಟಿಯಾಗಿದ್ದರು. ಈ ವೇಳೆ ಕೆಲವು ಸಿಬ್ಬಂದಿಗಳು ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು.ಇವರದೇ ಹೆಸರಿನಲ್ಲಿದ್ದ ಬಟಿಂಡಾ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿರುವ ಇಕ್ಬಾಲ್ ಎಂಬ ನೌಕರನ ಹೆಸರಿನಲ್ಲಿ 19 ಎಕರೆ ಭೂಮಿ ಬರೆದು ಕೊಟ್ಟಿರುವುದಾಗಿ ಬಲ್ಜಿತ್ ಸಿಂಗ್ ಹೇಳಿದ್ದಾರೆ.

ಇದಲ್ಲದೆ ಮತ್ತಿಬ್ಬರು ಸೇವಕರ ಹೆಸರಿನಲ್ಲಿ 6 ಮತ್ತು 4 ಎಕರೆ ಜಮೀನು ಬರೆದುಕೊಟ್ಟಿದ್ದಾರೆ. ಆಸ್ತಿ ಸಿಕ್ಕ ಮೇಲೆ ಕೆಸಲಗಾರರು ಕೂಡ ಖುಷಿಯಾಗಿದ್ದಾರೆ. ಬಾಲ್ಜಿತ್ ಸಿಂಗ್ ಅವರು ತಮ್ಮ ಐಷಾರಾಮಿ ಮನೆಯನ್ನು ನನಗೆ ನೀಡಿದ್ದಾರೆ ಎಂದು ಸೇವಕ ಇಕ್ಬಾಲ್ ಸಿಂಗ್ ಹೇಳಿದ್ದಾರೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com