ಬಿಹಾರ;ಶಾಲಾ ಶಿಕ್ಷಕರೋರ್ವರು ಅಮಾನುಷವಾಗಿ ಥಳಿಸಿದ ಕಾರಣ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪೂರ್ವ ಚಂಪಾರಣ್‌ನ ನಿವಾಸಿ ಬಜರಂಗಿ ಕುಮಾರ್ ಮೃತ ವಿದ್ಯಾರ್ಥಿ.ಬಾಲಕ ಖಾಸಗಿ ವಸತಿ ಶಾಲೆಯ ಮಧುಬನ್ ರೈಸಿಂಗ್ ಸ್ಟಾರ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಎಂದು ವರದಿಯಾಗಿದೆ.
ಈತ ಶನಿವಾರದಂದು ಹರ್ದಿಯಾ ಸೇತುವೆಯ ಕೆಳಗೆ ಸ್ನೇಹಿತರ ಜತೆಗೂಡಿ ಸಿಗರೇಟ್ ಸೇದಿದ್ದಾನೆ.ಇದನ್ನು ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಗಮನಿಸಿದ್ದರು.
ನಂತರ ವಿಜಯ್ ವಿದ್ಯಾರ್ಥಿಯನ್ನು ಶಾಲೆಗೆ ಕರೆದೊಯ್ದ ಅಲ್ಲಿ ಇತರ ಶಿಕ್ಷಕರೊಂದಿಗೆ ಸೇರಿ ಬೆಲ್ಟ್‌ನಿಂದ ಹೊಡೆದಿದ್ದಾರೆ ಎಂದು ಆತನ ತಾಯಿ ಉಸ್ಮಿಳಾ ದೇವಿ ಆರೋಪಿಸಿದ್ದಾರೆ.
ಬಜರಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ, ಆತನನ್ನು ಮುಜಾಫರ್‌ಪುರಕ್ಕೆ ಆಸ್ಪತ್ರೆಗೆ ಕಳುಹಿಸಲಾಗಿತ್ತು.ಅಲ್ಲಿ ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ.
ಬಜರಂಗಿಯ ಕುತ್ತಿಗೆ ಮತ್ತು ತೋಳುಗಳ ಮೇಲೆ ಆಳವಾದ ಗಾಯಗಳಾಗಿದ್ದು, ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ ಎಂದು ಆತನ ಸಹೋದರಿ ಆರೋಪಿಸಿದ್ದಾರೆ.