ಶಿವಮೊಗ್ಗ; ಭಜರಂಗದಳದ ಸುನಿಲ್ ಮೇಲೆ ಕೇಸ್ ದಾಖಲು, ಹಲ್ಲೆಗೆ ಯತ್ನ ಕೇಸ್ ನಲ್ಲಿ ಮತ್ತೊಂದು ಬೆಳವಣಿಗೆ

ಸಾಗರ;ಭಜರಂಗದಳದ ಕಾರ್ಯಕರ್ತ ಸುನಿಲ್ ಮೇಲೆ‌ ಹಲ್ಲೆಗೆ
ಯತ್ನ ಕೇಸ್ ಗೆ ಸಂಬಂಧಿಸಿ ಇದೀಗ ಮತ್ತೊಂದು ಬೆಳವಣಿಗೆ ನಡೆದಿದ್ದು ಸುನಿಲ್ ವಿರುದ್ಧ ಸಮೀರ್ ಸಹೋದರಿ ದೂರು ದಾಖಲಿಸಿದ್ದಾರೆ.

ಸುನಿಲ್ ವಿರುದ್ಧ ಬಂಧಿತ ಸಮೀರ್ ಸೋದರಿ ಸಬಾ ಕೌಸರ್ ದೂರು ನೀಡಿದ್ದಾರೆ.

ನಾನು ಕಾಲೇಜು ಒಂದರಲ್ಲಿ ಅಂತಿಮ ವರ್ಷದ ಬಿ.ಎಸ್​​ಸಿ ವ್ಯಾಸಂಗ ಮಾಡುತ್ತಿದ್ದೇನೆ.ಪ್ರತಿದಿನ ಕಾಲೇಜಿಗೆ ಹೋಗುವ ಮತ್ತು ಬರುವ ವೇಳೆ‌ ಭಜರಂಗದಳ ಕಾರ್ಯಕರ್ತನಾಗಿರುವ ಸುನಿಲ್ ಚುಡಾಯಿಸುತ್ತಿದ್ದನು.ಫೋನ್ ನಂಬರ್ ಕೊಡುವಂತೆ ಚುಡಾಯಿಸುತ್ತಿದ್ದ ಎಂದು ಸಬಾ ಕೌಸರ್ ದೂರು ನೀಡಿರುವ ಬಗ್ಗೆ ವರದಿಯಾಗಿದೆ.

ತಾನು‌ ನೀಡಿರುವ ದೂರಿನ ಬಗ್ಗೆ ಸಾಕ್ಷಾಧಾರ ಒದಗಿಸುವುದಾಗಿ ಕೂಡ ಸಬಾ ಕೌಸರ್ ತೆರಳಿದ್ದಾರೆ.

ಇನ್ನು ಭಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಮೂವರನ್ನು ಬಂಧಿಸಿದ್ದರು.

ಟಾಪ್ ನ್ಯೂಸ್