ಚಿಕ್ಕಮಗಳೂರು;ತರೀಕೆರೆಯಲ್ಲಿ ಬಜರಂಗದಳ ಕಾರ್ಯಕರ್ತನೊಬ್ಬ ಹಾಕಿದ ಪೋಸ್ಟ್ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಂಗೇನಹಳ್ಳಿ ಗ್ರಾಮದ ನಿವಾಸಿ ಕಾರ್ತಿಕ್ ಎಂಬ ಬಜರಂಗದಳದ ಕಾರ್ಯಕರ್ತನೆನ್ನಲಾದ ಯುವಕ ಮತದಾನದ ದಿನ ಸ್ಟೇಟಸ್ ಹಾಕಿ ಯಡವಟ್ಟು ಮಾಡಿಕೊಂಡಿದ್ದಾನೆ.
ಯಾರ ಹೆಂಡ್ತಿ ಪತಿವ್ರತೆನೋ ಅವರೆಲ್ಲ ಬಿಜೆಪಿಗೆ ವೋಟ್ ಹಾಕಿ ಎಂದು ಕಾರ್ತಿಕ್ ಸ್ಟೇಟಸ್ ಹಾಕಿದ್ದು ಈ ಸ್ಟೇಟಸ್ ನೋಡಿ ರೊಚ್ಚಿಗೆದ್ದ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.ಕೂಡಲೇ ಆರೋಪಿ ಕಾರ್ತಿಕ್ನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ತಿಕ್ ಹಗಲಿನಲ್ಲಿ ಸ್ಟೇಟಸ್ ಹಾಕಿದ್ದ ವಿವಾದ ತೆರೆದುಕೊಂಡಿದ್ದು ತಡರಾತ್ರಿಗೆ ಉಂಟಾಗಿದೆ. ಎಲ್ಲರೂ ಮತದಾನ ಮುಗಿಸಿ ಬಂದು ವಿರಮಿಸುತ್ತಿದ್ದಾಗ ಆತನ ಸ್ಟೇಟಸ್ ಚರ್ಚೆಗೆ ಕಾರಣವಾಗಿದೆ.
ಆಗಲೇ ಎಲ್ಲರೂ ರೊಚ್ಚಿಗೆದ್ದು ಠಾಣೆಗೆ ಬಂದು ಪ್ರತಿಭಟಿಸಿದ್ದಾರೆ.
ತಮಿಳುನಾಡಿನಲ್ಲಿ ಭೀಕರ ಅಪಘಾತ;ನಾಲ್ವರು ದುರ್ಮರಣ
ತಮಿಳುನಾಡು; ಬೆಳಿಗ್ಗೆ ವ್ಯಾನ್ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಿರುಚೆಂಡೂರ್ನಿಂದ ಕನ್ನಿಯಕುಮಿಗೆ ನೃತ್ಯ ತಂಡವನ್ನು ಕರೆದೊಯ್ಯುತ್ತಿದ್ದ ವ್ಯಾನ್ ನಾಗರ್ಕೋಯಿಲ್-ತಿರುನೆಲ್ವೇಲಿಯ ವೆಲ್ಲಮಡಂ ಬಳಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಬಸ್ ನಾಗರಕೋಯಿಲ್ ನಿಂದ ರೋಶಕುಲಂಗೆ ತೆರಳುತ್ತಿತ್ತು. ಮೃತಪಟ್ಟವರಲ್ಲಿ ವ್ಯಾನ್ ಚಾಲಕ ಕೂಡ ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾನ್ ಚಾಲಕ ನಿದ್ರೆಗೆ ಜಾರಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.