ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ; ಹೃದಯವಿದ್ರಾಹಕ ಘಟನೆ

ಬಾಗಲಕೋಟೆ:ಮೂವರು ಹೆಣ್ಣು ಮಕ್ಕಳಿಗೆ ವಿಷ ನೀಡಿ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ರೇಖಾ(28) ಎಂಬವರು ಮಕ್ಕಳಾದ ಸನ್ನಿಧಿ (7), ಸಮೃದ್ಧಿ (5), ಶ್ರೀನಿಧಿ (2)ಗೆ ವಿಷವುಣಿಸಿ ತಾವು ಕೂಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ‌.ಘಟನೆಯಲ್ಲಿ ನಾಲ್ವರು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರೇಖಾ ಮಾನಸಿಕ ಸಮಸ್ಯೆ ಕೂಡ ಹೊಂದಿದ್ದು,ಈ‌ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.

ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್