ಬೆಂಗಳೂರು; ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ-ಮಗನ ಕೊಲೆ ಪ್ರಕರಣದಲ್ಲಿ ಬೆಳವಣಿಗೆ ನಡೆದಿದ್ದು, ಪ್ರಕರಣದ ಆರೋಪಿ ಶೇಖಪ್ಪ(29)ನನ್ನು ಪೊಲೀಸರು ಬಂಧಿಸಿದ್ದಾರೆ.
ರವೀಂದ್ರನಗರದಲ್ಲಿ ವಾಸವಿದ್ದ ನವನೀತಾ(33) ಹಾಗೂ ಮಗ ಸೃಜನ್‌ನನ್ನು(11) ಮಂಗಳವಾರ ರಾತ್ರಿ ಕೊಲೆ ಮಾಡಲಾಗಿತ್ತು.
ನವನೀತಾ ಅವರ ಪತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆ ಕೈಗೊಂಡಾಗ ನವನೀತಾ ಪ್ರಿಯಕರ ಶೇಖಪ್ಪ ಆರೋಪಿ ಎಂಬುವುದು ತಿಳಿದು ಬಂದಿದೆ.
ಗದಗ ಜಿಲ್ಲೆಯ ನರಗುಂದದ ಶೇಖಪ್ಪ ಎಲೆಕ್ಟ್ರಿಷಿಯನ್ ಆಗಿದ್ದು, ಜಾಲಹಳ್ಳಿ ಬಳಿಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಆಂಧ್ರಪ್ರದೇಶದ ನವನೀತಾ, ಪತಿಯಿಂದ ದೂರವಾಗಿದ್ದರು. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ಜೊತೆ ರವೀಂದ್ರನಗರದಲ್ಲಿ ನೆಲೆಸಿದ್ದರು. ಇವರ ಮನೆ ಬಳಿಯೇ ಆರೋಪಿ ಶೇಖಪ್ಪನ ಕಚೇರಿ ಇತ್ತು. ನವನೀತಾ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಸ್ನೇಹ ಬೆಳೆಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಗದಗ ಜಿಲ್ಲೆಯ ನರಗುಂದದ ಶೇಖಪ್ಪ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಈತ ಜಾಲಹಳ್ಳಿ ಬಳಿಯ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆಂಧ್ರಪ್ರದೇಶದ ನವನೀತಾ, ಪತಿಯಿಂದ ದೂರವಾಗಿದ್ದು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳ ಜೊತೆ ರವೀಂದ್ರನಗರದಲ್ಲಿ ನೆಲೆಸಿದ್ದರು. ಇವರ ಮನೆ ಬಳಿಯೇ ಆರೋಪಿ ಶೇಖಪ್ಪನ ಕಚೇರಿ ಇತ್ತು.
ನವನೀತಾ ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಸ್ನೇಹ ಬೆಳೆಸಿದ್ದ. ಆರೋಪಿ ಶೇಖಪ್ಪ, ನವನೀತಾ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಜಗಳ ಆಗಿತ್ತು. ಮನೆಗೆ ಬಾರದಂತೆ ನವನೀತಾ ತಾಕೀತು ಮಾಡಿದ್ದರು ಎನ್ನಲಾಗಿದೆ.
ಮಂಗಳವಾರ ರಾತ್ರಿ ಮನೆಗೆ ನುಗ್ಗಿದ್ದ ಆರೋಪಿ, ಪುನಃ ಜಗಳ ತೆಗೆದಿದ್ದ. ನವನೀತಾ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದ. ಅದನ್ನು ನೋಡಿದ್ದ ಮಗ ಸೃಜನ್ ಕಿರುಚಾಡಿದ್ದ. ಕೊಲೆ ಸಂಗತಿಯನ್ನು ಬೇರೆಯವರಿಗೆ ಹೇಳುತ್ತಾನೆಂದು ತಿಳಿದು ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.