ಬೆಂಗಳೂರು;ಮನೆಯಲ್ಲಿ ಪುರಷನಾಗಿರುತ್ತಿದ್ದ ಮತ್ತು ಬೀದಿಯಲ್ಲಿ ಹೆಣ್ಣಿನ ವೇಷ ಹಾಕಿ ಸುಲಿಗೆಗೆ ಇಳಿಯುತ್ತಿದ್ದ ಆಸಾಮಿಗೆ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಹೆಣ್ಣಿನ ವೇಷ ಹಾಕುತ್ತಿದ್ದ ಹೆಂಡತಿ ಮಕ್ಕಳಿದ್ದರೂ ಬೀದಿಯಲ್ಲಿ ಮಂಗಳಮುಖಿ ವೇಷ ಧರಿಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಮದುವೆಯಾಗಿ ಪತ್ನಿ, ಮಕ್ಕಳಿದ್ದರೂ ಸಹ ಅಚ್ಚುಕಟ್ಟಾಗಿ ಜೀವನ ಮಾಡುವ ಬದಲು, ಐಷಾರಾಮಿ ಜೀವನದ ಗೀಳಿಗೆ ಆರೋಪಿ ಬಿದ್ದಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಹಾಕಿ ಭಿಕ್ಷಾಟನೆ ಮಾಡುತ್ತಿದ್ದ. ಮನೆಯಲ್ಲಿ ಈ ವಿಷಯ ಗೊತ್ತಾಗಬಾರದು ಎಂದು ಪ್ರತ್ಯೇಕವಾಗಿ ರೂಂ ಮಾಡಿಕೊಂಡು ತಂಗುತ್ತಿದ್ದ. ಹಣಕ್ಕಾಗಿ ಹೆಣ್ಣಿನ ವೇಷ ಧರಿಸಿ ಮಂಗಳಮುಖಿಯರ ಸಲುಗೆ ಬೆಳೆಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ.
ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ದಿನನಿತ್ಯ ಭಿಕ್ಷಾಟನೆ ಮಾಡುತ್ತಿದ್ದ, ಹಣ ಕೊಡದಿದ್ರೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಆರೋಪಿ ಅಕ್ರಮವಾಗಿ ಶೆಡ್ ನಿರ್ಮಿಸಲು ಮುಂದಾದಾಗ ಜುಲೈ 13ರಂದು BMRCL ಅಧಿಕಾರಿಗಳು, ಸ್ಥಳೀಯರು ಪರಿಶೀಲನೆಗೆ ಮುಂದಾಗಿದ್ದರು. ಈ ವೇಳೆ ಗಲಾಟೆ ಮಾಡಿದ್ದ ಆರೋಪಿ ಚೇತನ್ನನ್ನು ಹಿಡಿದ ಸ್ಥಳೀಯರು ಥಳಿಸಲು ಮುಂದಾದಾಗ ಅಸಲಿ ಕಹಾನಿ ಬಯಲಾಗಿತ್ತು.