ವಿವಾಹಿತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಾಸರಗೋಡು:ವಿವಾಹಿತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಬೇಳದಲ್ಲಿ ನಡೆದಿದೆ.

ದಾಮೋದರರವರ ಪುತ್ರಿ ಅಶ್ವತಿ(25) ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃತ್ಯ ನಡೆದಿದೆ.

ಇವರ ತಾಯಿ ಸುಜಾತ ಮನೆ ಸಮೀಪದ ಬೀಡಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ಮಧ್ಯಾಹ್ನ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಅಶ್ವತಿ ಬಾಗಿಲು ಬಡಿದರೂ ತೆರೆಯದಿದ್ದುರಿಂದ ಪರಿಸರದ ಮನೆಯವರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆದು ನೋಡಿದಾಗ ನೇಣುಬಿಗಿದಿರುವುದು ಕಂಡು ಬಂದಿದೆ. ಅಶ್ವತಿ ಕಣ್ಣೂರಿನಲ್ಲಿ ವಸ್ತ್ರ ದಂಗಡಿ ನೌಕರಿ ಯಾಗಿದ್ದು, ಎರಡು ದಿನಗಳಿಂದ ರಜೆಯಲ್ಲಿದ್ದಳು. ಪತಿ ಮನೋಹರ್ ವಿದೇಶ ದಲ್ಲಿ ಉದ್ಯೋಗದಲ್ಲಿದ್ದರು.

ಅಶ್ವತಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್