ಆಟವಾಡುವಾಗ ಮೂಗಿಗೆ ರಬ್ಬರ್ ಹಾಕಿದ 10 ವರ್ಷದ ಬಾಲಕಿ

ಗುಜರಾತ್​;10 ವರ್ಷದ ಬಾಲಕಿ ಆಟವಾಡುವಾಗ ತನ್ನ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.

ರಾಜ್​ಕೋಟ್​ನಲ್ಲಿ ಶಿವಾನಿ ತ್ರಿವೇದಿ ಎಂಬ ಮಗು ಆಟವಾಡುವಾಗ ಮೂಗಿಗೆ ರಬ್ಬರ್ ತುಂಡು ಹಾಕಿಕೊಂಡಿದೆ.

ಬಾಲಕಿ ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟವಾಗಿದ್ದು, ಸ್ವಲ್ಪ ದಿನಗಳ ನಂತರ ಮೂಗಿನಿಂದ ದುರ್ವಾಸನೆಯ ದ್ರವ ಮತ್ತು ರಕ್ತ ಹೊರಬರಲು ಪ್ರಾರಂಭಿಸಿದೆ.

ಈ ವೇಳೆ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ನಡೆಸಿದಾಗ ಮೂಗಿನಲ್ಲಿ ಏನೋ ಅಂಟಿಕೊಂಡಿರುವುದು ಕಂಡು ಬಂದಿತ್ತು.

ಬಳಿಕ ಮೂಗಿನ ಒಳಗಿನ ಚರ್ಮದಲ್ಲಿ ಸಿಲುಕಿಕೊಂಡಿದ್ದ ವಸ್ತುವನ್ನು ಬೈನಾಕ್ಯುಲರ್‌ಗಳಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊರ ತೆಗೆಯಲಾಗಿದೆ.

ಟಾಪ್ ನ್ಯೂಸ್