3 ಗಂಟೆಗೂ ಅಧಿಕ ಕಾಲ ಹೃದಯ ಬಡಿತ ನಿಂತಿದ್ದ ಮಗುವನ್ನು ಸಮಯ ಪ್ರಜ್ಞೆಯಿಂದ ವೈದ್ಯರು ರಕ್ಷಣೆ ಮಾಡಿದ್ದಾರೆ.
ಕೆನಡಾದ ನೈರುತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿ ಈ ಅಚ್ಚರಿ ಘಟನೆ ನಡೆದಿದೆ.ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ.
ಐದು ನಿಮಿಷ ಕಾಲ ಮಗು ನೀರಿನೊಳಗೆ ಇದ್ದುದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಮಗುವಿನ ಹೃದಯ ಬಡಿತವೂ ಸ್ತಬ್ದವಾಗಿದ್ದನ್ನು ಗಮನಿಸಿ ವೈದ್ಯರು ಸಿಪಿಆರ್ ನೀಡಿದ್ದಾರೆ.
ವೈದ್ಯರಿಗೆ ಲಂಡನ್ ನ ತಜ್ಞರ ತಂಡವೊಂದು ಮಾರ್ಗದರ್ಶನ ನೀಡುತ್ತಿತ್ತು.ಮೂರು ಗಂಟೆ ಕಳೆದ ಬಳಿಕ ಮಗು ಉಸಿರಾಟ
ಮತ್ತೆ ಆರಂಭಿಸಿದ್ದು, ವೈದ್ಯರ ಸಮಯಪ್ರಜ್ಞೆ ಮತ್ತು ಶ್ರಮ ಯಶಸ್ವಿಯಾಗಿದೆ.