ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಹಾವು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮಗು ಮೃತ್ಯು

-ಶಮೀರ್ ಅವರ ಪುತ್ರಿ ಆಸಿಯಾ ರೈಹಾನ್ ಮೃತ ಮಗು

ತ್ರಿಶೂರ್:ಹಿತ್ತಲಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಮುರಿಚೂರ್ ಪಲ್ಲಿಯಾಮಲಂ ಬಳಿ ನಡೆದಿದೆ.

ಶಮೀರ್ ಅವರ ಪುತ್ರಿ ಆಸಿಯಾ ರೈಹಾನ್ ಎಂಬ ಮಗು ತ್ರಿಶೂರಿನ ಮುರಿಚೂರ್ ಪಲ್ಲಿಯಾಮಲಂ ಬಳಿ ಹಾವು ಕಡಿತದಿಂದ ಸಾವನ್ನಪ್ಪಿದೆ.

ಆಸಿಯಾ ಇತರ ಮಕ್ಕಳೊಂದಿಗೆ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಳು.ಈ ವೇಳೆ ಹಾವು ಕಚ್ಚಿದೆ.ಮಗುವಿನ ಚೀರಾಟ ಕೇಳಿ ಪೋಷಕರು ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿದೆ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ. ಮಂಗಳವಾರ ಈ ಘಟನೆ ನಡೆದಿದೆ. ಇಂದು ಮುತ್ತೀಚೂರು ಜುಮಾ ಮಸೀದಿ ಧಪನ ಭೂಮಿಯಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಯಲಿದೆ. ಮಗುವಿನ ಸಾವಿನಿಂದ ಪೋಷಕರ ರೋಧನ ಮುಗಿಲು ಮುಟ್ಟಿದೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com