ಅಪರೂಪದ ಘಟನೆಯೊಂದರಲ್ಲಿ ಮೆಕ್ಸಿಕೋದಲ್ಲಿ ಅಪರೂಪದ ಮಗುವೊಂದು ಜನಿಸಿದೆ.ನ್ಯೂವೋ ಲಿಯಾನ್ ಸಿಟಿ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ವೈದ್ಯರು 6 ಸೆಂ.ಮೀ ಉದ್ದದ ಬಾಲ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಹೆಣ್ಣು ಮಗುವೊಂದು 2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ್ದು, ಶಸ್ತ್ರಚಿಕಿತ್ಸೆ ಮಾಡಿ ಆ ಬಾಲವನ್ನು ತೆಗೆಯಲಾಗಿದೆ.
ಬಾಲವು 5.7 ಸೆಂ.ಮೀಟರ್ ಉದ್ದವಿದ್ದು, ಮೃದುವಾಗಿತ್ತು. ಬಾಲದಲ್ಲಿ ಕೂದಲಿದ್ದು, ತುದಿಯ ಕಡೆಗೆ ಕಿರಿದಾಗುತ್ತಾ ವ್ಯಾಸದಲ್ಲಿ 3ಎಂಎಂ ಮತ್ತು 5 ಎಂಎಂ ನಡುವೆ ಇತ್ತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ಇದು ಸ್ನಾಯು, ರಕ್ತನಾಳಗಳು ಮತ್ತು ನರಗಳನ್ನು ಒಳಗೊಂಡಿರುವ ನಿಜವಾದ ಬಾಲ. ಪ್ರಾಣಿಗಳ ರೀತಿ ಬಾಲದಲ್ಲಿ ಯಾವುದೇ ಮೂಳೆಗಳಿಲ್ಲ. ಬಹುಶಃ ಗರ್ಭಾಶಯದಲ್ಲಿ ಬೆಳವಣಿಗೆಯಾಗುವಾಗ ಭ್ರೂಣದ ಬಾಲದಿಂದ ಬಾಲವು ಹೊರಹೊಮ್ಮಿದೆ ಎಂದು ವೈದ್ಯರು ಹೇಳಿದ್ದಾರೆ.ಆದರೆ ಸಾಮಾನ್ಯವಾಗಿ ಮೂಳೆಯನ್ನು ರೂಪಿಸಲು ದೇಹ ಭ್ರೂಣದ ಬಾಲವನ್ನು ಪುನಃ ಒಳಕ್ಕೆಳೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಈ ರೀತಿ ಶಿಶುಗಳಿಗೆ ಜನ್ಮ ನೀಡುವುದು ಅಪರೂಪದ ಸಂಗತಿ ಎಂದು ವಿಜ್ಞಾನಿಗಳು ಹೇಳುತ್ತಿದ್ದು, ಇದುವರೆಗೆ ಕೇವಲ 40 ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯರು ಹೇಳಿದ್ದಾರೆ.
ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಬಾಲವನ್ನು ತೆಗೆಯಲಾಗಿದ್ದು,ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.