4 ಕಾಲುಗಳಿರುವ ಹೆಣ್ಣು ಮಗು ಜನನ; ಅಪರೂಪದ ಘಟನೆ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ?

4 ಕಾಲುಗಳಿರುವ ಹೆಣ್ಣು ಮಗು ಜನನ; ಅಪರೂಪದ ಘಟನೆ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ?

ಮಧ್ಯಪ್ರದೇಶ;ವಿದಿಶಾದಲ್ಲಿ ಅಪರೂಪದ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಶಿಶು ಆರೋಗ್ಯವಾಗಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ಗೆ ಕಳುಹಿಸಿದ್ದಾರೆ.

ಕುರ್ವಾಯಿ ತಹಸಿಲ್‌ನ ಜೋನಖೇಡಿ ಗ್ರಾಮದ ನಿವಾಸಿಗಳಾದ ಧನುಷ್ ಬಾಯಿ ಮತ್ತು ಫೂಲ್ ಸಿಂಗ್ ಪ್ರಜಾಪತಿ ದಂಪತಿಗೆ ಈ ಮಗು ಹುಟ್ಟಿದೆ.

ಬಮೋರಾ ಸರ್ಕಾರಿ ಆಸ್ಪತ್ರೆಯಲ್ಲಿ ಧನುಷ್ ಬಾಯಿ ಈ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವೈದ್ಯರಾದ ಡಾ.ರಾಜೇಶ್, ಈ ರೀತಿಯ ಪ್ರಕರಣವನ್ನು ವೈದ್ಯಕೀಯ ಭಾಷೆಯಲ್ಲಿ ‘ಈಸಿಯೋಪಾಗಸ್’ ಎಂದು ಕರೆಯಲಾಗುತ್ತದೆ. ಸಾವಿರಾರು ಜನರಲ್ಲಿ ಒಬ್ಬರು ಮಾತ್ರ ಹೀಗೆ ಹುಟ್ಟುತ್ತಾರೆ ಎಂದು ಹೇಳಿದ್ದಾರೆ. ಅಂದರೆ ಮಗುವಿನಲ್ಲಿ ಈ ರೀತಿಯಾಗಿ ಹೆಚ್ಚುವರಿ ಅಂಗಗಳು ಬೆಳೆಯುತ್ತವೆ ಎಂದು ಹೇಳಿದ್ದಾರೆ.

ನವಜಾತ ಶಿಶುವಿಗೆ ದೈಹಿಕ ನ್ಯೂನತೆ ಇದೆ.ಗರ್ಭದಲ್ಲಿ ಬೆಳೆಯುತ್ತಿರುವಾಗಲೇ ಮಗುವಿನ ದೇಹದ ಕೆಳಗಿನ ಭಾಗದ ಹೆಚ್ಚುವರಿ ಬೆಳವಣಿಗೆಯಿಂದ ಇದು ಸಂಭವಿಸುತ್ತದೆ ಎಂದು ರಾಜೇಶ್ ವಿವರಿಸಿದರು.ಸಾವಿರಾರು ಜನರಲ್ಲಿ ಒಬ್ಬರಿಗೆ ಮಾತ್ರ ಈ ರೀತಿಯ ಸಮಸ್ಯೆ ಇರುತ್ತದೆ.ಶಿಶುವಿಗೆ ವಿದಿಶಾಗೆ ಮತ್ತು ಅಲ್ಲಿಂದ ಭೋಪಾಲ್‌ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್