ಉಡುಪಿ;ಯುವಕನೋರ್ವ ಹೃದಯಾಘಾತದಿಂದ ಮೃತ್ಯು, ಪ್ರೀತಿಸಿ ಮದುವೆಯಾಗಿದ್ದ ಆತನ ಪತ್ನಿ, ಮಗುವಿಗೆ ತಿರಸ್ಕಾರ!

ಉಡುಪಿ;ಯುವಕನೋರ್ವ ಹೃದಯಾಘಾತದಿಂದ ಮೃತ್ಯು, ಪ್ರೀತಿಸಿ ಮದುವೆಯಾಗಿದ್ದ ಆತನ ಪತ್ನಿ, ಮಗುವಿಗೆ ತಿರಸ್ಕಾರ!

ಉಡುಪಿ:ಯುವಕ‌ನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

ಹಲವಾರು ವರ್ಷಗಳಿಂದ ಉಡುಪಿಯಲ್ಲಿ ಮೆಕ್ಯಾನಿಕ್​ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಮೂಲತಃ ಬಾದಾಮಿ ಮೂಲದ ಅಯ್ಯಪ್ಪ(28) ಮೃತರು.ಇವರಿಗೆ ಗುರುವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಾದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯನ್ನು ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆ ವಿವಾಹವಾಗಿದ್ದರು. ಬಳಿಕ ಉಡುಪಿಯಲ್ಲಿ ಪತ್ನಿಯ ಜೊತೆ ವಾಸಿಸುತ್ತಿದ್ದರು.20 ದಿನಗಳ‌ ಮೊದಲು ದಂಪತಿಗೆ ಮಗು ಹುಟ್ಟಿತ್ತು.

ಗಂಡನ ಅಕಾಲಿಕ ಸಾವಿನಿಂದ ಪತ್ನಿ ಮತ್ತು ಮಗು ಅನಾಥವಾಗಿದೆ.ಅಯ್ಯಪ್ಪನ ಸಾವಿನ ಸುದ್ದಿ ತಿಳಿದು ಬಂದ ಆತನ ಕುಟುಂಬ ಆತನ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಆತನ ಪತ್ನಿಯನ್ನು ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ.ಇದರಿಂದ ತಾಯಿ-ಮಗುವನ್ನು ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.

ಟಾಪ್ ನ್ಯೂಸ್