ವಿಟ್ಲ; ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 574 ಅಂಕವನ್ನು ಪಡೆಯುವ ಮೂಲಕ ಆಯಿಷತ್ ಸಹಲಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಟ್ಲದ ಕೆದುಮೂಲೆ ನಿವಾಸಿಗಳಾದ ಹನೀಫ್ ಸಅದಿ ಹಾಗೂ ಬಿಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಷತ್ ಸಹಲಾ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಬೊಳಂತಿಮೊಗರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು.ಸಹಲಾ ತಂದೆ ಹನೀಫ್ ಸಅದಿ ಮದರಸಾ ಶಿಕ್ಷಕರಾಗಿದ್ದು, ಪುತ್ರಿಯ ಸಾಧನೆಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈಕೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 574 ಅಂಕವನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಸಹಲಾಳ ಮುಂದಿನ ವಿದ್ಯಾಭ್ಯಾಸಕ್ಕೆ ಪೋಷಕರು ಶುಭ ಹಾರೈಕೆ ಮಾಡಿದ್ದಾರೆ.