‌‌ಈಶ್ವರಪ್ಪನ ಪ್ರತಿರೂಪ, ತೋಚಿದಂತೆ ಮಾತನಾಡುವಲ್ಲಿ ಹೆಚ್ಚು ಉತ್ಸಾಹಿ-ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಗ್ಗೆ ಆಯನೂರು ಮಂಜುನಾಥ್ ಏನೆಲ್ಲಾ ಹೇಳಿದ್ರು?

ಶಿವಮೊಗ್ಗ;ಜೆಡಿಎಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಈಗಿನ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಈಶ್ವರಪ್ಪನವರ ಪ್ರತಿರೂಪದಂತೆಯೇ ಇದ್ದು,ತೋಚಿದಂತೆ ಮಾತನಾಡುವಲ್ಲಿ ಹೆಚ್ಚು ಯುವಕ, ಹೆಚ್ಚು ಉತ್ಸಾಹಿ ಈ ಹರಕು ಬಾಯಿಗೆ ಕೂಡ ಹೊಲಿಗೆ ಬೀಳುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಗುರುವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಅತ್ಯಂತ ಉತ್ಸಾಹದಿಂದ ಈ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕೆಂದು ವಿಶೇಷ ತಯಾರಿ ನಡೆಸಿ, ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಈ ಬಾರಿ ಶಾಂತಿ ಸೌಹಾರ್ದತೆಗಾಗಿ ಎಲ್ಲ ಧರ್ಮೀಯರು ಸಹಕಾರ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರ ವ್ಯಕ್ತಿತ್ವದ ಪ್ರತಿರೂಪದ ವ್ಯಕ್ತಿಯೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿಂದೆ ಸಿದ್ದರಾಮಯ್ಯ ಅವರ ತಲೆ, ಕೈ ಕತ್ತರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಯಾವಾಗಲೂ ಜೇಬಲ್ಲಿ ಮಚ್ಚು ಇಟ್ಟುಕೊಂಡವರಂತೆ ಬಿಜೆಪಿ ಅಭ್ಯರ್ಥಿ ಮಾತನಾಡುತ್ತಾರೆ. ಈಶ್ವರಪ್ಪ ಅವರಂತೆಯೇ ಮಾನಸಿಕತೆಯ, ಚಿಂತನೆಯ, ಅವರದ್ದೇ ಆಯ್ಕೆಯ ಅಭ್ಯರ್ಥಿಯಾಗಿದ್ದು,ಜನರು ಈ ಬಾರಿ ಹರಕು ಬಾಯಿಗಳಿಗೆ ಹೊಲಿಗೆ ಹಾಕಲಿದ್ದಾರೆ. ಇದಕ್ಕೆ ನಾನು ಸೂಜಿಯಾಗುತ್ತೇನೆ ಎಂದು ಹೇಳಿದರು.

ನನ್ನ ಎದುರಾಳಿಗಳು ಯಾರೆಂಬುದು ಮುಖ್ಯ ಅಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಎದುರಾಳಿಯಾಗಿವೆ. ನನ್ನ ಎದುರಾಳಿಗಳಲ್ಲಿ ಒಬ್ಬರು ಮಸೀದಿ ಒಡೆದವರು. ಮತ್ತೊಬ್ಬರು ಮಂದಿರಕ್ಕಾಗಿ ಸಿಹಿ ಹಂಚಿದವರು. ಇವರುಗಳ ಹೆಸರನ್ನು ನಾನು ಹೇಳಬೇಕಾಗಿಲ್ಲ. ಶಿವಮೊಗ್ಗ ಕ್ಷೇತ್ರದ ಜನತೆಗೆ ಗೊತ್ತಿದೆ.ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ತಳಮಟ್ಟದ ಸಂಘಟನೆ ಇದೆ.ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಜೆಡಿಎಸ್‌ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಸಂಘಟನೆ ಬಲಪಡಿಸಿದ್ದಾರೆ.ಅವರ ನೇತೃತ್ವದಲ್ಲಿ ಈ ಚುನಾವಣೆಯನ್ನು ಎದುರಿಸುತ್ತೇನೆ.ಗೆಲುವು ನಮ್ಮದೇ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com