ಮಹಿಳೆಯ ಹೃದಯವನ್ನು ಕಿತ್ತು ಅದನ್ನು ಆಲೂಗೆಡ್ಡೆ ಜೊತೆ ಬೇಯಿಸಿ ತನ್ನ ಕುಟುಂಬಕ್ಕೆ ಉಣಬಡಿಸಿದ ಬಳಿಕ ಅವರನ್ನು ಕೊಲೆ ಮಾಡಿ ವ್ಯಕ್ತಿಯೋರ್ವ ದುಷ್ಕೃತ್ಯ ಮೆರೆದಿದ್ದಾನೆ.
ಈ ಭಯಾನಕ ಕೃತ್ಯ ಅಮೆರಿಕದ ಒಕ್ಲಾಹೋಮ್ ರಾಜ್ಯದಲ್ಲಿ 2021ರಲ್ಲಿ ನಡೆದಿತ್ತು.ಇದೀಗ ಅರೋಪಿ ಆಯಂಡರ್ಸನ್ ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆಯಂಡರ್ಸನ್ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಮನ ಪರಿವರ್ತನೆ ಅಡಿಯಲ್ಲಿ 20 ವರ್ಷದ ಬದಲು ಕೇವಲ 3 ವರ್ಷ ಶಿಕ್ಷೆ ಬಳಿಕ ಬಿಡುಗಡೆ ಮಾಡಲಾಗಿತ್ತು.
ಇದೀಗ ಆಯಂಡರ್ಸನ್ ಭಯಾನಕ ಕೃತ್ಯ ಎಸಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.