12 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ; ಬಾಲಕ ಮೃತ್ಯು

-12 ವರ್ಷದ ಅಯಾನ್​​ ಮೃತ ಬಾಲಕ

ಉತ್ತರಪ್ರದೇಶ;ಬೀದಿ ನಾಯಿಗಳು 12ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಹೃದಯವಿದ್ರಾಹಕ ಘಟನೆ ಬರೇಲಿಯ ಸಿಬಿ ಗಂಜ್​ ಎಂಬಲ್ಲಿ ನಡೆದಿದೆ.

ಮೃತ ಬಾಲನಕನಿಗೆ 12 ವರ್ಷದ ಅಯಾನ್​​ ಎಂದು ಗುರುತಿಸಲಾಗಿದೆ. ಈತ ಖಾನಾ ಗೌಂಟಿಯಾ ಎಂಬ ಹಳ್ಳಿಯಲ್ಲಿ ಗೆಳೆಯರ ಜತೆ ಸೇರಿ ಆಟವಾಡುತ್ತಿದ್ದ. ಆಗ ಅಲ್ಲಿಗೆ ಬೀದಿನಾಯಿಗಳ ದಂಡು ಬಂದಿದೆ. ಹೆದರಿ ಅಯಾನ್​ ಅಲ್ಲಿಂದ ಓಡಿದ್ದಾನೆ.ಈ ನಾಯಿಗಳು ಅವನನ್ನು ಬೆನ್ನಟ್ಟಿ ಹೋಗಿವೆ. ಅಯಾನ್​ ಕೆಳಗೆ ಬಿದ್ದಾಗ ಅವನ ಮೇಲೆ ಎರಗಿ, ಕಚ್ಚಿ ಹಾಕಿದೆ.

ಕಚ್ಚುತ್ತಿದ್ದ ನಾಯಿಗಳನ್ನು ದಾರಿಹೋಕರೊಬ್ಬರು ಓಡಿಸಿದ್ದಾರೆ. ರಕ್ತದ ಮಡುವಲ್ಲಿ ಇದ್ದಿದ್ದ ಅಯಾನ್​​ನನ್ನು ಅವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಬಾಲಕ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಎರಡು ತಿಂಗಳ ಹಿಂದೆ ಬರೇಲಿಯಲ್ಲಿ ಮೂರು ವರ್ಷದ ಮಗುವೊಂದು ಬೀದಿ ನಾಯಿಗಳ ಬಾಯಿಗೆ ಬಲಿಯಾಗಿತ್ತು. ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ನಾಯಿಗಳು ಎಳೆದುಕೊಂಡು ಹೋಗಿ ಕೊಂದು ಹಾಕಿದ್ದವು.

ಕಳೆದ ವರ್ಷ ಡಿಸೆಂಬರ್​​ನಲ್ಲಿ ಸಿಬಿ ಗಂಜ್​ ಏರಿಯಾದ ಮಥುರಾಪುರ ಗ್ರಾಮದಲ್ಲಿ ಗೋಲು ಎಂಬ ಹುಡುಗನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕೊಂದು ಹಾಕಿದ್ದವು.ಈ ಪ್ರದೇಶಗಳಲ್ಲಿ ಬೀದಿ ನಾಯಿ‌ ದಾಳಿಯ ಹಲವು ಪ್ರಕರಣ ನಡೆಯುತ್ತಿದ್ದು, ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಆದರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com