ಕುಡಿದ ಮತ್ತಿನಲ್ಲಿ ಸಿಕ್ಕ- ಸಿಕ್ಕವರಿಗೆ ಢಿಕ್ಕಿ ಹೊಡೆದ ಆಟೋ ಡ್ರೈವರ್ ; 7 ಮಂದಿಗೆ ಗಾಯ

ಕುಡಿದ ಮತ್ತಿನಲ್ಲಿ ಸಿಕ್ಕ- ಸಿಕ್ಕವರಿಗೆ ಢಿಕ್ಕಿ ಹೊಡೆದ ಆಟೋ ಡ್ರೈವರ್; 7 ಮಂದಿಗೆ ಗಾಯ

ಚಿಕ್ಕಬಳ್ಳಾಪುರ:ಆಟೋ ಚಾಲಕನೋರ್ವ ಕುಡಿದ ಅಮಲಿನಲ್ಲಿ
ಇನ್ನೊಂದು ಆಟೋಗೆ ಮತ್ತು ಪಾದಚಾರಿಗೆ ಢಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ 7 ಜನರಿಗೆ ಗಾಯಗಳಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯದಲ್ಲಿರುವ ಬಾಗೇಪಲ್ಲಿ ರಸ್ತೆಯಲ್ಲಿ ಘಟನೆ ನಡೆದಿದೆ.

ಶ್ರೀನಿವಾಸಪುರ ನಿವಾಸಿ ವೆಂಟರಾಯಪ್ಪ ಕುಡಿದು ವಾಹನ ಚಲಾಯಿಸಿದ ಡ್ರೈವರ್​. ನವೀನ್, ಚೌಡಪ್ಪ, ಸಂಜಯ್, ಹಿಂದು, ಗೌತಮ್, ನಂದೀಶ, ಸೋಮಶೇಖರ್ ಗಾಯಾಳುಗಳು ಎಂದು ತಿಳಿದು ಬಂದಿದೆ.

ವೆಂಕಟರಾಯಪ್ಪ ಕುಡಿದ ಅಮಲಿನಲ್ಲಿ ಚಿಂತಾಮಣಿ ನಗರದಿಂದ ಬಾಗೇಪಲ್ಲಿ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ತೆರಳುವ ವೇಳೆ ಪೆಟ್ರೋಲ್ ಟ್ಯಾಂಕ್​ ಬಳಿ ಪಾದಚಾರಿಗೆ ಆಟೋ ಡಿಕ್ಕಿ ಹೊಡೆದಿದೆ. ನಂತರ ಗೌನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆಟೋ ಚಾಲಕನಿಗೆ ಸಹ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್