ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳಿಂದ ಮಹಿಳೆ ಸೇರಿ ನಾಲ್ವರ ಬಂಧನ

ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳಿಂದ ಮಹಿಳೆ ಸೇರಿ ನಾಲ್ವರ ಬಂಧನ

ಗುಜರಾತ್;ಭಯೋತ್ಪಾದನಾ ನಿಗ್ರಹದಳ (ಎಟಿಎಸ್)ಆಧಿಕಾರಿಗಳು ಕರಾವಳಿ ಪಟ್ಟಣವಾದ ಪೋರಬಂದರ್‌ನಲ್ಲಿ ಮಹಿಳೆ ಸೇರಿದಂತೆ ನಾಲ್ವರು ಶಂಕಿತರನ್ನು ಬಂಧಿಸಿದೆ.

ಎಟಿಎಸ್ ಮೂಲಗಳ ಪ್ರಕಾರ, ವಿದೇಶಿ ಪ್ರಜೆಯಾಗಿರುವ ಮತ್ತೊಬ್ಬ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ.

ನಾಲ್ವರು ಆರೋಪಿಗಳು ಐಎಸ್ ಉಗ್ರಗಾಮಿ ಘಟಕದ ಭಾಗವಾಗಿದ್ದಾರೆ ಎಂದು ಎಟಿಎಸ್‌ಗೆ ಮಾಹಿತಿ ಸಿಕ್ಕಿತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದು, ದೇಶ ತೊರೆದು ಐಎಸ್ ಸೇರಲು ಯೋಜನೆ ರೂಪಿಸಿದ್ದರು. ಎಟಿಎಸ್ ಅವರನ್ನು ಗುರುತಿಸಿತು ಮತ್ತು ಅವರ ಚಲನವಲನಗಳನ್ನು ಟ್ರ್ಯಾಕ್ ಮಾಡಿದೆ ಎನ್ನಲಾಗಿದೆ.

ಡಿಐಜಿ ದೀಪನ್ ಭದ್ರನ್ ಮತ್ತು ಎಸ್ಪಿ ಸುನೀಲ್ ಜೋಶಿ ನೇತೃತ್ವದಲ್ಲಿ ಶುಕ್ರವಾರ ತಡರಾತ್ರಿ ಪೋರಬಂದರ್‌ನಲ್ಲಿ ಸುಮೇರಾ ಎಂಬ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದೆ.ದಾಳಿ ವೇಳೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.

ಕೆಲವು ದಿನಗಳ ಹಿಂದೆ, ಗುಜರಾತ್ ಎಟಿಎಸ್ ಅಹಮದಾಬಾದ್‌ನಲ್ಲಿ ಐಎಸ್ ಸದಸ್ಯರು ಎಂದು ಶಂಕಿಸಲಾದ ಮೂವರನ್ನು ಬಂಧಿಸಿದ್ದರು.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ