ಎಟಿಎಂನಲ್ಲಿದ್ದ ಹಣವನ್ನೆಲ್ಲ ಇಲಿಗಳು ಕಚ್ಚಿಕಚ್ಚಿ ಕತ್ತರಿಸಿ ಹಾಕಿದ ಶಾಕಿಂಗ್ ಘಟನೆ ಮತ್ತೆ ಸುದ್ದಿಯಾಗಿದೆ.
ಅಸ್ಸಾಂ ರಾಜ್ಯದ ಎಟಿಎಂ ಒಂದರಲ್ಲಿ ಬ್ಯಾಂಕ್ ಅಧಿಕಾರಿಗಳು ಎಟಿಎಂ ಯಂತ್ರವನ್ನು ಪರಿಶೀಲಿಸಲು ಬಂದರು ಮತ್ತು ಅದನ್ನು ತೆರೆದಾಗ ಸತ್ತ ಇಲಿ ಮತ್ತು ಚೂರುಚೂರು ನೋಟುಗಳು ಕಂಡುಬಂದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಗ್ಧಜ್ಯೋತಿ ದೇವ್ ಮಹಂತ ತಿಳಿಸಿದ್ದಾರೆ.
ಇಲಿಗಳು 500 ಮತ್ತು 2,000 ರೂಪಾಯಿ ನೋಟುಗಳನ್ನು ಕತ್ತರಿಸಿ ಹಾಕಿದೆ.
ಲಕ್ಷಗಟ್ಟಲೆ ಹಣವನ್ನು ಕಚ್ಚಿ ಹಾಕಿದ ಇಲಿಯು ಒಂದು ವಾರ ಆದ ಮೇಲೆ ವಾಸನೆ ಬರಲು ಆರಂಭವಾಗಿದೆ. ಇದೇನಿದು ಎಂದು ಮಿಷನ್ ತೆಗೆದು ನೋಡಿದಾಗ ಈ ಅನಾಹುತ ಆಗಿರುವುದು ಬೆಳಕಿಗೆ ಬಂದಿದೆ.
12,38,000 ರೂಪಾಯಿ ಮೌಲ್ಯದ ನೋಟುಗಳನ್ನು ಇಲಿಗಳು ಕಚ್ಚಿ ಹಾಕಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಎಟಿಎಂ ಅನ್ನು ಗುವಾಹಟಿ ಮೂಲದ ಎಫ್‌ಐಎಸ್ ಹೆಸರಿನ ಹಣಕಾಸು ಕಂಪನಿ ನಡೆಸುತ್ತಿದೆ.