ಯುವತಿಯನ್ನು ಬರ್ಬರವಾಗಿ ಕೊಲೆ; ಸ್ನೇಹಿತನಿಂದಲೇ ಕೃತ್ಯ

ಯುವತಿಯನ್ನು ಬರ್ಬರವಾಗಿ ಕೊಲೆ

ತ್ರಿಶೂರು;ಯುವತಿಯನ್ನು ಬರ್ಬರವಾಗಿ ಕೊಲೆ‌ ಮಾಡಿ ಶವವನ್ನು ಕಾಡಿನಲ್ಲಿ ಎಸೆದಿರುವ ಘಟನೆ ಕೇರಳದಲ್ಲಿ ನಡೆದಿದೆ.

26 ವರ್ಷದ ಮಹಿಳೆ ಅಥಿರಾಗೆ ಕೊಲೆ‌ ಮಾಡಿ ತ್ರಿಸ್ಸೂರ್ ಜಿಲ್ಲೆಯ ಚಾಲಾಕುಡಿಯ ತುಂಬುರ್ ಮೂಜಿ ಕಾಡಿನಲ್ಲಿ ಎಸೆಯಲಾಗಿದೆ.

ಅಥಿರಾ ತನ್ನ ಸ್ನೇಹಿತನಾದ ಅಖಿಲ್ ಗೆ ಸಾಲವನ್ನು ನೀಡಿದ್ದಳು. ಅಲ್ಲದೆ, ಅಖಿಲ್ ಈ ಹಣವನ್ನು ಕಂತಿನ ರೂಪದಲ್ಲಿ ಮರುಳಿಸುತ್ತಿದ್ದ ಎನ್ನಲಾಗಿದೆ. ಈ ನಡುವೆ ಅಥಿರಾ ಹಣವನ್ನು ಒಮ್ಮೆಲೇ ನೀಡುವಂತೆ ಹೇಳಿದ್ದಾಳೆ.ಇದರಿಂದ ಆಕೆಗೆ ಕೊಲೆ ಮಾಡಿದ್ದಾನೆ.

ಸ್ಥಳೀಯ ಪತ್ರಿಕೆಯೊಂದರ ಪ್ರಕಾರ, ಅಥಿರಾಳ ಗಂಡ ಸನಿಲ್ ತನ್ನ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ಕಾಲಡಿ ಪೊಲೀಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯ ಜಾಡು ಹಿಡಿದು ಹೊರಟಾಗ ಅಥಿರಾಳ ಮೊಬೈಲ್ ನ ಲಾಸ್ಟ್ ಲೊಕೇಶನ್ ಟ್ರಾಕ್ ಮಾಡಿದ್ದಾರೆ. ಈ ವೇಳೆ ಲಾಸ್ಟ್ ಲೊಕೇಶನ್ ತುಂಬುರ್ ಮೂಜಿ ಕಾಡಿನ ಹತ್ತಿರ ದೊರೆತಿದ್ದು, ಅಖಿಲ್ ನ ಜೊತೆ ಇದ್ದುದು ತಿಳಿದು ಬಂದಿದೆ. ಅಖಿಲ್ ನನ್ನ ವಶಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪೋಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಅಖಿಲ್ ಸಾಲವನ್ನು ಹಿಂದಿರುಗಿಸಲಾಗದ ಕಾರಣದಿಂದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com