ಉತ್ತರಪ್ರದೇಶ;ಮಾಜಿ ಸಂಸದ, ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಕೊಲೆ ಆರೋಪಿ ಲವಲೇಶ್ ತಿವಾರಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಟುವಟಿಕೆಗಳ ಮೂಲಕ ಆನ್‌ಲೈನ್‌ನಲ್ಲಿ ಸಕ್ರಿಯರಾಗಿರುವ ಬಗ್ಗೆ ವರದಿಯಾಗಿದೆ.
ಅರುಣ್ ಮೌರ್ಯ, ಸನ್ನಿ ಮತ್ತು ಲವ್ಲೇಶ್ ತಿವಾರಿ, ಅತೀಕ್ ಅಹ್ಮದ್ ಗೆ ಶೂಟೌಟ್ ಮಾಡಿ ಕೊಲೆ ಮಾಡಿ ಬಂದಿತರಾಗಿದ್ದರು.
ಕಳೆದ ಎರಡು ವಾರಗಳಲ್ಲಿ ತಿವಾರಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ ವಿಷಯಗಳನ್ನು ಬಂಡಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ. ಪೋಸ್ಟ್‌ಗಳು ಪ್ರಚೋದನಕಾರಿ ಮತ್ತು ದ್ವೇಷದ ಸ್ವರೂಪದ್ದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿವಾರಿ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವ ವ್ಯಕ್ತಿ/ ವ್ಯಕ್ತಿಗಳನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್ಪಿ ಅಭಿನಂದನ್ ಹೇಳಿದ್ದಾರೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಇದು ಗಂಭೀರವಾಗಿದೆ ಎಂದು ಅವರು ಹೇಳಿದರು ಎಂದು ಹಿಂದೂಸ್ಥಾನ್ ಟೈಮ್ಸ್.ಕಾಂ ವರದಿ ಮಾಡಿದೆ.
ಏಪ್ರಿಲ್ 15 ರಂದು ಪ್ರಯಾಗ್‌ರಾಜ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅತೀಕ್ ಸಹೋದರರನ್ನು ಹತ್ಯೆ ಮಾಡಿದ ಮೂವರು ಹಿಟ್‌ಮನ್‌ಗಳಲ್ಲಿ ತಿವಾರಿ ಒಬ್ಬರು ಮತ್ತು ಪ್ರಸ್ತುತ ಪ್ರತಾಪ್‌ಗಢ ಜೈಲಿನಲ್ಲಿದ್ದಾರೆ.
ಏಪ್ರಿಲ್ 19 ರಂದು ಹಂಚಿಕೊಂಡ ಪೋಸ್ಟ್‌ಗಳಲ್ಲಿ ಜನರು ತಿವಾರಿ ಅವರನ್ನು ಬೆಂಬಲಿಸುತ್ತಾರೆಯೇ ಎಂದು ಕೇಳಿದ್ದಾರೆ. ಪೋಸ್ಟ್ 326 ಲೈಕ್ ಗಳನ್ನು ಗಳಿಸಿದೆ.
ಮತ್ತೊಂದು ಖಾತೆಯಲ್ಲಿ, ತಿವಾರಿ ಅವರ ಪೋಷಕರೊಂದಿಗಿನ ಚಿತ್ರವನ್ನು ಏಪ್ರಿಲ್ 24 ರಂದು ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಚಿತ್ರವನ್ನು ಏಪ್ರಿಲ್ 19 ರಂದು ಲಾಕ್ ಆಗಿರುವ ಮತ್ತೊಂದು ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.