ಮೂರು ವರ್ಷದ ಬಾಲಕಿಯ ಗುಪ್ತಾಂಗವನ್ನು ಸಿಗರೇಟ್ ನಿಂದು ಸುಟ್ಟು ಚಿತ್ರಹಿಂಸೆ, ಪೈಶಾಚಿಕ ಘಟನೆ ವರದಿ..

ಅಸ್ಸಾಂ;ಮೂರು ವರ್ಷದ ಅವಳಿ ಮಕ್ಕಳಿಗೆ ಪೈಶಾಚಿಕವಾಗಿ ಹಿಂಸೆ ನೀಡುತ್ತಿದ್ದ ಕಾರಣಕ್ಕೆ ಅಸ್ಸಾಂ ಪೊಲೀಸರು ವೈದ್ಯ ದಂಪತಿಯನ್ನು ಬಂಧಿಸಿದ್ದಾರೆ.

ಬಾಲಕಿಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಡಾ.ಸಂಗೀತಾ ದತ್ತಾ ಹಾಗೂ ಡಾ.
ವಲಿಯುಲ್‌ ಅವರ ಮೇಲೆ ಪೊಲೀಸರು ಪೋಕ್ಸೋ ಕೇಸ್‌ ದಾಖಲಿಸಿ ಬಂಧನ ಮಾಡಿದ್ದಾರೆ.

ವೈದ್ಯ ದಂಪತಿಯ ಮೇಲೆ 3 ವರ್ಷದ ಮಗುವಿನ ಗುಪ್ತಾಂಗವನ್ನು ಸಿಗರೇಟ್‌ ಮೂಲಕ ಸುಟ್ಟಿರುವ ಆರೋಪ ಹೊರಿಸಲಾಗಿದೆ.

ಮಕ್ಕಳ ವೈದ್ಯಕೀಯ ಪರೀಕ್ಷೆ ಬಳಿಕ ಕೃತ್ಯ ನಡೆದಿರುವುದು ದೃಡಪಟ್ಟಿದೆ ಎನ್ನಲಾಗಿದೆ.ವೈದ್ಯ ದಂಪತಿಗಳು ವಾಸವಿದ್ದ ರೋಮಾ ಎನ್‌ಕ್ಲೇವ್‌ನ ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಸೆರೆಯಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ.

ತನಿಖೆಯ ವೇಳೆ 3 ವರ್ಷದ ಹೆಣ್ಣು ಮಗುವಿನ ಖಾಸಗಿ ಭಾಗಗಳಲ್ಲಿ ಗಾಯ ಮತ್ತು ಸುಟ್ಟ ಗುರುತುಗಳು ಮತ್ತು ಆಕೆಯ ದೇಹದ ಹಲವು ಭಾಗಗಳಲ್ಲಿ ಏಟುಗಳು ಕಾಣಿಸಿಕೊಂಡಿದೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಸರಿಯಾಗಿ ನಡೆಯಲೂ ಬಾರದ ಮಗುವಿನ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ತಿಳಿಸಿದ್ದಾರೆ.

ಅಪರಾಧವಾಗಿರುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂ ಪೊಲೀಸರು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ನೇಮಕ ಮಾಡುವಂತೆ ಕೋರಿದ್ದೇವೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಹೇಳಿದ್ದಾರೆ.

ಹೆಣ್ಣು ಮಗುವಷ್ಟೇ ಅಲ್ಲ, ವೈದ್ಯ ದಂಪತಿಗಳು ಅಪ್ರಾಪ್ತ ಬಾಲಕನಿಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಅವರು ಪ್ರಸ್ತುತ ಗುವಾಹಟಿಯ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈಗ ಅಂತಿಮ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ ಎಂದು ಬರಾಹ್‌ ತಿಳಿಸಿದ್ದಾರೆ.

ವೈದ್ಯ ದಂಪತಿಗಳು ಯಾಕಾಗಿ ಈ ಮಕ್ಕಳಿಗೆ ಈ ರೀತಿಯ ಪೈಶಾಚಿಕ ಹಿಂಸೆ ನೀಡುತ್ತಿದ್ದರು ಎನ್ನುವುದು ಇನ್ನಷ್ಟೇ
ಗೊತ್ತಾಗಬೇಕಿದೆ. ಸತ್ಯವನ್ನು ತಿಳಿಯುವ ನಿಟ್ಟಿನಲ್ಲಿ ನಮ್ಮ ತನಿಖೆ ಮುಂದುವರಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುವಾಹಟಿಯ ಪಲ್ಟಾನ್ ಬಜಾರ್ ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನ (307), ಸ್ವಯಂಪ್ರೇರಣೆಯಿಂದ ಘೋರವಾದ ಗಾಯ (325), ಅಕ್ರಮ ಸಂಯಮ (341), ಜುವೆನೈಲ್ ಜಸ್ಟೀಸ್ ಆಕ್ಟ್ನ ಸೆಕ್ಷನ್ 75ರ ಪ್ರಕಾರ ಕೇಸ್ ದಾಖಲಿಸಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com